ಕುಂದಗೋಳ : ತಾಲೂಕಿನ ಎಲ್ಲೆಡೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಯರಗುಪ್ಪಿ ಗ್ರಾಮದಲ್ಲಿ ನಿನ್ನೆ ಬುಧವಾರ ಮನೆಯೊಂದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಯರಗುಪ್ಪಿ ಗ್ರಾಮದ ಬಿಬಿಜಾನ್ ಅಲ್ಲಿಸಾಬ್ ನದಾಫ್ ಎಂಬುವವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿದೆ. ಈ ಹಿಂದೆ ಮನೆಯ ಒಂದು ಭಾಗ ಬಿದ್ದಿದ್ದು ನಿನ್ನೆ ಸುರಿದ ಮಳೆಗೆ ಮತ್ತೊಂದು ಮನೆ ಗೋಡೆ ಹಾಗೂ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿದೆ.
Kshetra Samachara
18/11/2021 07:35 pm