ಕುಂದಗೋಳ : ರೈತಾಪಿ ಮಂದಿಗೆ ಮಳೆ ಆದ್ರೂ ಕಷ್ಟ ಮಳೆ ಆಗದಿದ್ರೂ ಕಷ್ಟ ನೋಡ್ರಿ, ಯಾಕಂದ್ರ ಮಳೆ ಆಗಲಿಲ್ಲಾ ಅಂದ್ರ ಬರಗಾಲ ಚಲೋ ಮಳಿ ಆದ್ರ ಈ ರೈತರ ಹೊಲಕ್ಕ ಹೋಗೋ ದಾರಿ ಕೆರೆ ಅದ್ಹಂಗ ಆಗೇತಿ ಬಿಡ್ತವ್.
ಹಿಂಗ್ ಕೆರೆಯಂತಾದ ಹಿರೇಹರಕುಣಿ ದೊಡ್ಡದಾರಿ ಒಳಗ ಸಿಕ್ಕಿ ಹಾಕ್ಕೊಂಡಂತಹ ರೈತರ್ ಟ್ರ್ಯಾಕ್ಟರ್ ಏನ ಹರಸಾಹಸ ಪಟ್ರೂ ಮ್ಯಾಲ ಬಂದಿಲ್ಲ ನೋಡ್ರಿ.
ಕೃಷಿ ಕೆಲಸ ದೊಡ್ಡದಾರಿ ಹಿಡಿದು ಹೊರಟ ಹಿರೇಹರಕುಣಿ ರೈತರೊಬ್ಬರ ಟ್ರ್ಯಾಕ್ಟರ್ ಕೆಸರಿನ್ಯಾಗ ಸಿಕಾಕೊಂಡೇತಿ ಇನ್ನ ಮಳ್ಯಾಗ ಈ ಟ್ರ್ಯಾಕ್ಟರ್ ಎತ್ತಾಕಂತ ಬಂದ ಮತ್ತೊಂದ ಟ್ರ್ಯಾಕ್ಟರ್ ನು ಅದ ಕೆಸನ್ಯಾಗ ಸಿಕಾಕೊಂಡೇತಿ ಜೋಕ ಕೇಳಿ ಈ ಎರಡು ಟ್ರ್ಯಾಕ್ಟರ್ ಎತ್ತಾಕ ಅಂತ ಬಂದ ಮೂರನೇ ಟ್ರ್ಯಾಕ್ಟರ್ ಕೂಡಾ ಅದೇ ಕೇಸನ್ಯಾಗ ಸಿಕ್ಕಾಕೊಂಡೇತಿ.. ಈ ರಾಡ್ಯಾಗಿಂದ ಟ್ರ್ಯಾಕ್ಟರ್ ಹೊರಗ ತರಾಕ ರೈತರು ಸುಸ್ತಾಗಿ ಎರಡ ಟ್ರ್ಯಾಕ್ಟರ್ ತಗೊಂಡ ಮತ್ತೊಂದನ್ನಾ ಅಲ್ಲೇ ಬಿಟ್ಟ ಹೋಗ್ಯಾರ
ಈ ಹಿಂದ ಹಿರೇಹರಕುಣಿ ರೈತರು ರಸ್ತೆ ಸುಧಾರಣೆ ಮಾಡ್ರಿ ಅಂತ ಜನಪ್ರತಿನಿಧಿಗಳಿಗೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ರೂ ಆದ್ರ ಏನೂಪ್ರಯೋಜನ ವಾಗಿಲ್ಲ ನೋಡ್ರಿ.. ಇಂತಹ ದುಸ್ಥಿತ್ಯಾಗ ರೈತರು ದಿನಾ ಬಾಳೆ ಮಾಡಬೇಕ.
Kshetra Samachara
10/09/2021 09:45 am