ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮನೆಗಳಿಗೆ ನುಗ್ಗಿದ ಮಳೆ ನೀರು, ಜನ ಜೀವನ ಅತಂತ್ರ

ನವಲಗುಂದ : ನಿನ್ನೆ (ಬುಧವಾರ) ಸುರಿದ ಭಾರಿ ಮಳೆಗೆ ನವಲಗುಂದ ಪಟ್ಟಣದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿ ಭಾರಿ ಪ್ರಮಾನದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಜೀವನ ಅತಂತ್ರವಾಗಿದೆ.

ಬಸವೇಶ್ವರ ನಗರದ ಹಸೀನಾ ಬಾನು ಬಾರದವಾಲೆ ಅವರ ಮನೆಗೆ ಸಂಪೂರ್ಣ ನೀರು ನುಗ್ಗಿದ ಹಿನ್ನೆಲೆ ಇಡೀ ರಾತ್ರಿ ನೀರನ್ನು ಮನೆಯಿಂದ ಹೊರ ತೆಗೆಯಲು ಪರದಾಟ ನಡೆಸುವಂತಾಗಿತ್ತು. ಇಲ್ಲಿನ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿಯಿಂದಲೇ ಮಳೆಗಾಲದಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗುತ್ತೆ ಅನ್ನೋದು ಜನರ ಆರೋಪವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಮಾಜಿ ಸಚಿವ ಕೆ ಎನ್ ಗಡ್ಡಿ, ನವಲಗುಂದ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಮಾಜಿ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಸದಸ್ಯರಾದ ಚಂದ್ರಲೇಖಾ ಮಳಗಿ, ಮಂಜುಳಾ ಜಾಧವ, ಕಿರಿಯ ಆರೋಗ್ಯ ನಿರೀಕ್ಷಕರಾದ ಸಾವಿತ್ರಿ ಮುಶನ್ನವರ ಹಾಗೂ ಸಿಬ್ಬಂದಿ ಭೇಟಿ ನೀಡಿದರು.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

28/07/2022 04:11 pm

Cinque Terre

18.8 K

Cinque Terre

0

ಸಂಬಂಧಿತ ಸುದ್ದಿ