ಕುಂದಗೋಳ : ಇನ್ನೇನು ಕೆಲವೇ ಕೆಲ ದಿನಗಳಲ್ಲಿ ರೈತಾಪಿ ಜನರ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಲಿದ್ದು ರೈತರಿಗೆ ಬೀಜೋಪಚಾರದ ಮಾಹಿತಿ ನೀಡಬೇಕಾದ ತೋಟಗಾರಿಕೆ ಇಲಾಖೆ ಖಾಯಂ ಅಧಿಕಾರಿ ಇಲ್ಲದೆ ಖಾಲಿ ಕುರ್ಚಿ ಮೇಲೆ ಅಧಿಕಾರ ನಡೆಸುತ್ತಿದೆ.
ಕುಂದಗೋಳ ತಾಲೂಕಿನ ಸಮಗ್ರ ಹಳ್ಳಿಗರ ಕೃಷಿ ಕಾಯಕಕ್ಕೆ ಬೀಜೋಪಚಾರ, ಬೀಜಗಳ ಆಯ್ಕೆ, ಗುಣಮಟ್ಟ, ಮಣ್ಣಿನ ಫಲವತ್ತತೆ ಅನುಸಾರ ಬಿತ್ತನೆ, ಬಿತ್ತನೆಯ ವಿಧಾನ ತಿಳಿಸಬೇಕಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆ ಕಳೆದ ಎಂಟು ವರ್ಷಗಳಿಂದ ಪ್ರಭಾರಿಯಾಗಿ ಮುಂದುವರೆದಿದೆ.
ಈ ಕಾರಣ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಸಿಗಳ ರೋಗ ಬಾಧೆಗೆ ಸಿಗಬೇಕಾದ ಸಲಹೆ ಸೂಚನೆ ಸೌಲಭ್ಯಗಳು ಮರಿಚೀಕೆ ಆಗ್ತಾ ಇದ್ದು, ಪ್ರಸ್ತುತ 8 ಜನ ಸಿಬ್ಬಂದಿ ಇರಬೇಕಾದ ಕಚೇರಿಯಲ್ಲಿ ಕೇವಲ 3 ಜನ ಸಿಬ್ಬಂದಿ ಕರ್ತವ್ಯದಲ್ಲಿದ್ದು ಉಳಿದ ಹುದ್ದೆ ಖಾಲಿ ಇವೆ.
ಇನ್ನೂ ಸಮರ್ಪಕ ಅಧಿಕಾರಿಗಳೇ ಇಲ್ಲದ ಕಚೇರಿಗೆ ರೈತರು ಬರುವುದು ಹೋಗುವುದು ಅಧಿಕಾರಿಗಳು ಸಿಕ್ಕಾಗ ವಾಗ್ವಾದ ಮಾಡುವ ಸನ್ನಿವೇಶ ನಡೆದಿದ್ದು ಸ್ಥಳೀಯ ರೈತರ ಕೃಷಿ ಕೀಟ ಬಾಧೆ, ಅತಿವೃಷ್ಟಿ ಔಷಧಿ ಸಿಂಪರಣೆಗೆ ಪರಿಹಾರ ದೂರವಾಗಿವೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
06/05/2022 10:45 am