ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಂದಿಗಳ ಕಾಟಕ್ಕೆ ಬೇಸತ್ತ ಗ್ರಾಮ ಪಂಚಾಯಿತಿ ಏನಿದೆ ಕ್ರಮ

ಕುಂದಗೋಳ : ಈ ಗ್ರಾಮದಲ್ಲಿ ಓಣಿಯಲ್ಲಿ ಆಟವಾಡುವ ಮಕ್ಕಳು ಸೇರಿ ಹೊಲದಲ್ಲಿ ರೈತ ಬೆಳೆದ ಬೆಳೆಗಳಿಗೆ ಹಂದಿಗಳ ಕಾಟ ಅತಿಯಾಗಿದ್ದು, ಹಂದಿಗಳ ನಿರ್ವಹಣೆ ಮಾಡುವಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯವೇ ಮಾಧ್ಯಮಕ್ಕೆ ಪತ್ರ ಬರೆದು ವಿಷಯ ಬಹಿರಂಗ ಪಡಿಸಿದೆ.

ಕುಂದಗೋಳ ಮತಕ್ಷೇತ್ರ ಹುಬ್ಬಳ್ಳಿ ತಾಲೂಕಿನ ಬೃಹತ್ ಗ್ರಾಮ ಶರೇವಾಡವೇ ಇಂತಹ ನಿರ್ಧಾರ ಕೈಗೊಂಡು ಗ್ರಾಮಸ್ಥರಿಗೆ ನಿತ್ಯ ಕಾಡುತ್ತಿರುವ ಹಂದಿಗಳ ಉಪಟಳಕ್ಕೆ ಬೇಸತ್ತು ಹಂದಿಗಳನ್ನು ನಿರ್ವಹಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈಗಾಗಲೇ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡಿದ ಹಂದಿಗಳು ರೈತರು ಕಷ್ಟಪಟ್ಟು ಬೆಳೆದ ಗೋವಿನಜೋಳ, ಹತ್ತಿ, ಸೋಯಾಬಿನ್ ಬೆಳೆಗಳನ್ನು ಸಂಪೂರ್ಣ ಹಾಳು ಮಾಡಿವೆ ಶರೇವಾಡ ಗ್ರಾಮದಲ್ಲಿ ಸೇರಿಕೊಂಡ ಬಿಡಾಡಿ ಹಂದಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮೂರು ದಿನಗಳಲ್ಲಿ ಹಂದಿ ಸ್ಥಳಾಂತರ ಮಾಡದಿದ್ದರೆ ಗ್ರಾಮ ಪಂಚಾಯಿತಿಯೇ ಉಪಯುಕ್ತ ಕ್ರಮ ರೂಪಿಸುವ ಮುನ್ಸೂಚನೆ ನೀಡಿದೆ.

Edited By : Manjunath H D
Kshetra Samachara

Kshetra Samachara

15/08/2021 04:58 pm

Cinque Terre

40.63 K

Cinque Terre

2

ಸಂಬಂಧಿತ ಸುದ್ದಿ