ಹುಬ್ಬಳ್ಳಿ: ಇಷ್ಟು ದಿನ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ಜನರಿಗೆ ಈಗ ಸರ್ಕಾರದ ಆದೇಶ ಬಂದರೂ ಕೂಡ ಮಾಸ್ಕ್ ಹಾಕಲು ಮನಸು ಮಾಡುತ್ತಿಲ್ಲ. ದಿನಕ್ಕೊಂದು ಸರ್ಕಾರದ ಆದೇಶದಿಂದ ಬೇಸತ್ತಿರುವ ಜನರು ಯಾವ ಕೊರೊನಾ, ಯಾವ ಕೋವಿಡ್ ಎಂದು ಮಾಸ್ಕ್ ಇಲ್ಲದೆಯೇ ಓಡಾಡುತ್ತಿದ್ದಾರೆ.
ಹೌದು... ನಿನ್ನೆಯಷ್ಟೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸುವಂತೆ ಆದೇಶ ನೀಡಿದೆ. ಆದರೆ ವಾಣಿಜ್ಯನಗರಿಯಲ್ಲಿ ಮಾತ್ರ ಯಾವುದೇ ಆದೇಶವನ್ನು ಕಿವಿಗೆ ಹಾಕಿಕೊಳ್ಳದೇ ಕಿವಿಯ ಹಿಂದೆ ಹಾಕಿದ್ದ ಮಾಸ್ಕ್ ದಾರವನ್ನು ಕಿತ್ತೊಗೆದು ಯಥಾವತ್ತಾಗಿ ತಮ್ಮ ದೈನಂದಿನ ಕೆಲಸಕ್ಕೆ ಸಾಗುತ್ತಿದ್ದಾರೆ.
ಹುಬ್ಬಳ್ಳಿಯ ಆಯಕಟ್ಟಿನ ಸ್ಥಳಗಳಲ್ಲಿ ಒಂದಾಗಿರುವ ಹಳೆ ಹುಬ್ಬಳ್ಳಿ ಸರ್ಕಲ್ ವೊಂದರಲ್ಲಿ ಜನರು ಯಾರೊಬ್ಬರೂ ಕೂಡ ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಪಬ್ಲಿಕ್ ನೆಕ್ಸ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೋವಿಡ್ ನಾಲ್ಕನೇ ಅಲೆಗೆ ಕೇರೇ ಮಾಡದೇ ಓಡಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಒಟ್ಟಿನಲ್ಲಿ ಮೂರು ಅಲೆಯನ್ನು ಎದುರಿಸಿದ ಜನರಿಗೆ ನಾಲ್ಕನೇ ಅಲೆಯ ಮಾಸ್ಕ್ ಆದೇಶ ಮತ್ತಷ್ಟು ಆತಂಕಕ್ಕೆ ದುಡಿದ್ದು, ಬಹುತೇಕ ಜನರು ಯಾವುದೇ ಮಾಸ್ಕ್ ಧರಿಸದೇ ಎಂದಿನಂತೆ ತಮ್ಮ ದೈನಂದಿನ ಜೀವನ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/04/2022 12:58 pm