ಹುಬ್ಬಳ್ಳಿ: ಕಳೆದ ನಾಲ್ಕೈದು ದಿನಗಳ ಹಿಂದೆ ವಾಣಿಜ್ಯ ನಗರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಸಾಕಷ್ಟು ಮನೆಗಳು ಕೂಡ ಕುಸಿದು ಬಿದ್ದಿವೆ. ಆದ್ರೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಹೌದು….. ನಿರಂತರ ಸುರಿದ ಗುಡುಗು ಸಹಿತ ಮಳೆಯಿಂದಾಗಿ ನಗರದ ವಾರ್ಡ್ ನಂಬರ್ 54 ರಲ್ಲಿ ಬರುವ ಹೆಗ್ಗೇರಿಯ ದೇವರಾಜ ನಗರದ ನಿವಾಸಿ ಮಂಜು ಅಮ್ಮಿನಬಾವಿ ಎಂಬುವವರ ಮನೆ ಕುಸಿದು ಬಿದ್ದಿದೆ. ಆದ್ರೆ ಇದುವರೆಗೂ ಕಾರ್ಪೊರೇಟರ್, ತಹಶೀಲ್ದಾರ್ ಯಾರೂ ಕೂಡ ಭೇಟಿ ನೀಡಿಲ್ವಂತೆ. ಈ ಮನೆ ಬಿದ್ದಿದ್ದು ಮಾನ್ಯ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರ ಗಮನಕ್ಕೆ ಬಂದರೂ ಕೂಡ ಈ ಕುಟುಂಬಕ್ಕೆ ನೆಲೆ ನೀಡಲು ಮುಂದಾಗುತ್ತಿಲ್ವಂತೆ. ಪೂರ್ತಿ ಮನೆ ಕುಸಿದಿದೆ. ಮನೆಯಲ್ಲಿದ್ದವರು ಪ್ರಾಣಾಯಾಮದಿಂದ ಪಾರಾಗಿದ್ದಾರೆ. ಇದ್ದ ಮನೆ ಮಳೆಗೆ ಕುಸಿದು ಹೋಗಿದೆ. ನಮಗೆ ನೆಲೆ ಮಾಡಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ ಹೇಳಬೇಕೆಂದರೆ ಈ ಅಕಾಲಿಕ ಮಳೆಯಿಂದಾಗಿ ವಾಣಿಜ್ಯ ನಗರಿಯಲ್ಲಿ ಸಾಕಷ್ಟು ಮನೆಗಳು ಕುಸಿದು ಬಿದ್ದು, ಕುಟುಂಬಗಳು ಬೀದಿಗೆ ಬಂದಿವೆ. ಕೂಡಲೇ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
13/10/2022 12:28 pm