ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿ ಹಾಗೂ ಬೇಕಾಬಿಟ್ಟಿಯಾಗಿ ತೆಗೆದ ಗುಂಡಿಗಳು ಯಾವ ಹೊತ್ತಿನಲ್ಲಿ ಯಾರ ಜೀವ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಕೇಶ್ವಾಪೂರದ ಸೆಂಟ್ ಮೇರಿ ಸ್ಕೂಲ್ ಬಳಿಯಲ್ಲಿ ತೆಗೆದಿರುವ ಗುಂಡಿಯೊಂದರಲ್ಲಿ ಬೈಕ್ ಸವಾರನೊಬ್ಬ ವೇಳೆ ಬಿದ್ದಿರುವ ಘಟನೆ ರಾತ್ರಿಯ ವೇಳೆಯಲ್ಲಿ ನಡೆದಿದೆ.
ಕಾಮಗಾರಿ ನಡೆಸುವ ಗುತ್ತಿಗೆದಾರರು ಹಾಗೂ ಸಿಬ್ಬಂದಿಗೆ ಸೂಚನಾ ಫಲಕಗಳನ್ನು ಹಾಕುವ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದ್ದು, ರಸ್ತೆಯಲ್ಲಿರುವ ದೊಡ್ಡ ಗುಂಡಿಯೊಂದರಲ್ಲಿ ಬೈಕ್ ಸವಾರ ಬಿದ್ದಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗುಂಡಿಯಲ್ಲಿ ಬಿದ್ದಿರುವ ಬೈಕ್ ನೋಡಿದ ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನೂ ಬೇಕಾಬಿಟ್ಟಿಯಾಗಿ ಗುಂಡಿ ತೆಗೆದಿದ್ದು, ಯಾವುದೇ ಬೀದಿ ದ್ವೀಪದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಂತಹದೊಂದು ಅವಘಡ ಸಂಭವಿಸಿದೆ. ಈಗಾಗಲೇ ಸಾಕಷ್ಟು ಜನರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಪಾಲಿಕೆಯ ಸಿಬ್ಬಂದಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ.
ಒಟ್ಟಿನಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನೆ ಫಲಕ ಹಾಗೂ ನಿರ್ಬಂಧದ ಸೂಚನೆ ಹಾಕುವುದು ಹುಬ್ಬಳ್ಳಿ ಧಾರವಾಡದಲ್ಲಿ ಮಾತ್ರ ಪಾಲನೆ ಆಗುತ್ತಿಲ್ಲ.
Kshetra Samachara
22/09/2022 12:02 pm