ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿದ್ರೆಯ ಮಂಪರಿನಲ್ಲಿದ್ದಾಗ ಕುಸಿದು ಬಿತ್ತು ಮನೆ : ಮಣ್ಣಿನಡಿ ಸಿಲುಕಿದ್ದ ಮಕ್ಕಳ ರಕ್ಷಣೆ

ಧಾರವಾಡ : ಅವರೆಲ್ಲರೂ ರಾತ್ರಿ ಊಟ ಮಾಡಿ ಎಲ್ಲರೂ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದರು. ಗಾಢವಾದ ನಿದ್ರೆಯಲ್ಲಿದ್ದಾಗ ಅವರಿಗೆ ಆಘಾತವೊಂದು ಕಾದಿತ್ತು. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.

ಈಗಾಗಲೇ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಅದೇ ರೀತಿ ದೊಡ್ಡ ಅನಾಹುತವೊಂದು ಇದೀಗ ಧಾರವಾಡದಲ್ಲಿ ತಪ್ಪಿದಂತಾಗಿದೆ. ಹೌದು! ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ರುದ್ರಪ್ಪ ಮೇಲಿನಮನಿ ಎಂಬುವವರ ಮನೆಯ ಗೋಡೆ ಕುಸಿದು ರಾತ್ರಿ ಮಲಗಿದ್ದವರ ಮೇಲೆ ಬಿದ್ದಿದೆ. ಇದರಲ್ಲಿ ನಾಲ್ಕು ಮಕ್ಕಳು ಹಾಗೂ ಓರ್ವ ಗೃಹಿಣಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಣ್ಣಿನ ಗೋಡೆ ಕುಸಿದು ಬಿದ್ದಿದ್ದರಿಂದ ಮಣ್ಣಿನಲ್ಲಿ ನಾಲ್ಕೂ ಜನ ಮಕ್ಕಳು ಸಿಲುಕಿಕೊಂಡಿದ್ದರು. ತಡರಾತ್ರಿ ಈ ಘಟನೆ ನಡೆದಿದರೂ ಗೋಡೆ ಬಿದ್ದ ಸಪ್ಪಳಕ್ಕೆ ಎದ್ದ ಅಕ್ಕಪಕ್ಕದ ಮನೆಯವರು ಮಣ್ಣಿನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಿವ್ಯಾ, ಶ್ರಾವಣಿ, ಸಂಗೀತಾ ಎಂಬ ಮಕ್ಕಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದರು. ಈ ಮಕ್ಕಳ ತಾಯಿ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ ಸಂತೋಷ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ ಈ ಬಡವರ ನೆರವಿಗೆ ಧಾವಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಒಟ್ಟಾರೆಯಾಗಿ ಮಳೆಯಿಂದಾಗಿ ಧಾರವಾಡದಲ್ಲಿ ಸಂಭವಿಸಬೇಕಾಗಿದ್ದ ದೊಡ್ಡ ಅನಾಹುತವನ್ನು ಸ್ಥಳೀಯರೇ ತಪ್ಪಿಸಿ ಐದು ಜೀವಗಳನ್ನು ಉಳಿಸಿದ್ದಾರೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Somashekar
Kshetra Samachara

Kshetra Samachara

14/09/2022 05:59 pm

Cinque Terre

30.75 K

Cinque Terre

2

ಸಂಬಂಧಿತ ಸುದ್ದಿ