ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲು ವರುಣಾರ್ಭಟ ಹೆಚ್ಚಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆಗಳು ನೆಲಕ್ಕುರುಳುತ್ತಿವೆ.
ಹೌದು ಹುಬ್ಬಳ್ಳಿಯ ನಗರದ ವಾರ್ಡ್ ನಂ. 68 ರಲ್ಲಿ ಬರುವ ಘಂಟಿಕೇರಿ ಓಣಿಯ ಬ್ಯಾಡಗೇರ ಓಣಿಯಲ್ಲಿ ಸತತ ಮಳೆಯಿಂದಾಗಿ ಮಲ್ಲೇಶಪ್ಪ ಪಾಟೀಲ ಇವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ಒಳಗಿದ್ದ ಮಲ್ಲೇಶಪ್ಪ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಬೇಕಾಗಿದೆ.
Kshetra Samachara
10/07/2022 04:39 pm