ಕುಂದಗೋಳ : ಧಾರಾವಾಡ ಜಿಲ್ಲೆಯ ಅತೀ ಹಿಂದುಳಿದ ತಾಲೂಕು ಕುಂದಗೋಳದಲ್ಲಿ ಮೂಲ ಸೌಕರ್ಯಗಳ ಕೊರತೆಯ ಕೂಗಿಗೆ ಕಿವಿಗೊಡುವವರೇ ಇಲ್ಲಾ ಬಿಡಿ ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಬರ್ತಾರೇ ವೋಟ್ ತಗೋತಾರೇ ಹೋಗ್ತಾರೆ ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ ಇಲ್ನೋಡಿ.
ಇದೋ ಕುಂದಗೋಳ ಪಟ್ಟಣದಿಂದ ಬೆಟದೂರಿಗೆ ಸಂಪರ್ಕ ಕಲ್ಪಿಸುವ ಬರೋಬ್ಬರಿ 7.23 ಕಿಲೋ ಮೀಟರ್ ಒಳ ರಸ್ತೆ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದ್ದು ರಸ್ತೆಯ ಡಾಂಬರನ್ನ ರೈತರು ಕೈಯಿಂದ ಮಣ್ಣಂತೆ ಗೂಡಿಸಿ ಕಳಪೆ ಕಾಮಗಾರಿಗೆ ಸಾಕ್ಷಿ ತೋರಿಸ್ತಾರೆ.
ಈ ರಸ್ತೆ ಮ್ಯಾಜಿಕ್ ಏನಪ್ಪಾ ರಸ್ತೆ ಯುದ್ದಕ್ಕೂ ಗುಂಡಿಗಳು ಸಾಲುಗಳೇ ಇದ್ದು ಡಾಂಬರ್ ಭಾರೀ ಗಾತ್ರದ ವಾಹನ ಸಂಚಾರಕ್ಕೆ ರಸ್ತೆ ಕಿತ್ತೋಗಿದೆ ಇಲ್ಲಿ ಸಂಚರಿಸುವ ವಾಹನ ಸವಾರರು ಸೇರಿದಂತೆ ಮುಖ್ಯವಾಗಿ ಬೆಟದೂರು ಕುಂದಗೋಳ ರೈತರಿಗೆ ತೀವ್ರ ತೊಂದರೆ ಎದುರಾಗಿದ್ದು ಎಂಎಲ್ಎ ಹಾಗೂ ಎಂಪಿ ಯಾವಾಗ ಕ್ಷೇತ್ರ ನೋಡಾಕ ಬರ್ತಾರೀ ಅವ್ರು ಬರೋಲ್ಲ ಅಂತಾರೇ.
ಇನ್ನೂ ಅಧಿಕಾರಿಗಳು ನಾಮಾಕಾವಾಸ್ತೆ ಜನಪ್ರತಿನಿಧಿಗಳಿಂದ ಅಂಗೀಕಾರ ಸಿಗೋವರೆಗೂ ಇವ್ರು ಕಚೇರಿ ಬಿಟ್ಟು ಬಿಸಿಲಿಗೆ ಬರೋಲ್ಲಾ ಈಗಾಗಲೇ ಮೂರ್ನಾಲ್ಕು ವರ್ಷಗಳಿಂದ ಹಾಳಾದ ರಸ್ತೆ ಈ ವರ್ಷ ಸಂಪೂರ್ಣ ಕಿತ್ತು ಒಗೆದಂತಾಗಿದ್ದು ಸಂಬಂಧಪಟ್ಟವರು ಗಮನಿಸಬೇಕಾಗಿದೆ.
Kshetra Samachara
22/09/2020 03:44 pm