ಕುಂದಗೋಳ : ಸ್ವಾಮಿ ಮೊನ್ನೆ ತಾನೇ ಪಬ್ಲಿಕ್ ನೆಕ್ಸ್ಟ್ ಪೌರ ಕಾರ್ಮಿಕರ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಸುದ್ದಿಯೊಂದನ್ನು ಬಿತ್ತರಿಸಿ ಬಸ್ ನಿಲ್ದಾಣದ ಪಕ್ಕದ ವಿದ್ಯುತ್ ಪ್ರವಾಹಕಗಳ ಕೆಳಗೆ ಕಸ ಹಾಕಬೇಡಿ ಪೌರ ಕಾರ್ಮಿಕರ ಜೀವಕ್ಕಿದೆ ಕುತ್ತು ಎಂದು ವರದಿ ಮಾಡಿದ್ದರು ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿಯಾಗಲಿ ಸಾರ್ವಜನಿಕರಾಗಲಿ ಇನ್ನು ಎಚ್ಚೆತ್ತುಕೊಂಡಿಲ್ಲ ನೋಡಿ.
ನೀವು ಈ ದೃಶ್ಯದಲ್ಲಿ ಗಮನಿಸಿ ಬಾಗಿ ಎದ್ದರೆ ತಲೆಗೆ ತಾಗುವ ಹಂತದಲ್ಲಿರುವ ಈ ವಿದ್ಯುತ್ ಕಂಬಗಳು ನಡುವೆ ಸಾರ್ವಜನಿಕರು ಹಾಕಿದ ಕಸವನ್ನು ಪೌರ ಕಾರ್ಮಿಕರು ತಮ್ಮ ಜೀವ ಲೆಕ್ಕಿಸದೆ ಟ್ರ್ಯಾಕ್ಟರ್ ತುಂಬಿ ಹಾಕುತ್ತಿದ್ದಾರೆ. ತಮ್ಮ ಕಷ್ಟದ ಬಗ್ಗೆ ಮಾತಾಡಲು ಭಯ ಪಡುವ ಕಾರ್ಮಿಕರು ತಮ್ಮ ಕೆಲಸಕ್ಕೆ ವಿಧಿಯಿಲ್ಲದೆ ಒಗ್ಗಿಕೊಂಡಿದ್ದಾರೆ.
ಕುಂದಗೋಳ ಪಟ್ಟಣದಲ್ಲಿ ಕಸದ ತೊಟ್ಟಿಗಳೇ ಇಲ್ಲಾ ಹೀಗಾಗಿ ಜನ ವಿದ್ಯುತ್ ಕಂಬದ ಕೆಳಗೆ ಕಸ ಸುರಿಯುತ್ತಿದ್ದು ಅದರ ವಿಲೇವಾರಿಯೆ ಈಗ ಕಾರ್ಮಿಕರ ಜೀವ ನುಂಗಲು ಹೊಂಚು ಹಾಕಿದೆ. ದಯವಿಟ್ಟು ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಿಸಿ ಕಸದ ತೊಟ್ಟಿ ನಿರ್ಮಿಸಿ ಇಲ್ಲವೆ ಹೆಸ್ಕಾಂ ಅಧಿಕಾರಿಗಳು ಗಮನಿಸಿ ಇಲ್ಲಿ ಕಸ ಹಾಕಿದಂತೆ ಕಂಟ್ರೇಜ್ ಜೋಡಿಸಿ ಎಂಬುದು ಪೌರ ಕಾರ್ಮಿಕರ ಮೂಕ ಅಳಲು.
Kshetra Samachara
22/09/2020 02:56 pm