ಕಲಘಟಗಿ : ನಗರದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿವೆ ಅದರಲ್ಲೂ ಈ ತಡಸದಿಂದ ಕಲಘಟಗಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾದ ಪರಿಣಾಮ ವಾಹನಗಳು ರಸ್ತೆಯಲ್ಲಿ ಸಿಲುಕಿ ಹಾಕಿಕೊಂಡು ಮೇಲೆಳೆಲು ಹರಸಾಹಸ ಪಡುತ್ತಿದ್ದು ಈ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ ಕಷ್ಟವಾಗುತ್ತಿದೆ.
ಇದೋ ತಡಸ ಮತ್ತು ಕಲಘಟಗಿಯ ನಡು ರಸ್ತೆಯಲ್ಲಿ ಲಾರಿಯೊಂದು ಸಿಲುಕಿ ಹಾಕಿಕೊಂಡು ಇನ್ನುಳಿದ ವಾಹನ ಸವಾರರಿಗೆ ತೊಂದರೆಯಾದ ಘಟನೆ ರವಿವಾರ ಸಾಯಂಕಾಲ ನಡೆದಿದ್ದು ಇತರ ವಾಹನ ಸವಾರರು ಹೇಂಗೋ ಪಾರಾಗಲು ಪ್ರಯತ್ನಿಸಿ ಲಾರಿ ಪಕ್ಕದಲ್ಲಿ ಮತ್ತೊಂದು ಟಾಟಾಏಸ್ ಗಾಡಿ ಸಿಲುಕಿದೆ ಇನ್ನು ಉಳಿದ ಲಾರಿಗಳು ರಸ್ತೆಯುದ್ದಕ್ಕೂ ಸರದಿಯಲ್ಲಿ ನಿಂತ ಪರಿಣಾಮ ಕೆಲಹೊತ್ತು ಸುತ್ತಲಿನ ಗ್ರಾಮಸ್ಥರಿಗೂ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು ವಾಹನ ಸವಾರೊಬ್ಬರು ಪಬ್ಲಿಕ್ ನೆಕ್ಸ್ಟ್ ವಿಡಿಯೋ ನೀಡಿ ರಸ್ತೆ ದುರಸ್ತಿ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.
Kshetra Samachara
05/10/2020 06:01 pm