ನವಲಗುಂದ : ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾನಿಕರಿಗೆ ಇದೆಂತಾ ದುಸ್ಥಿತಿ ಬಂದಿದೆ ನೋಡಿ, ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಆಗುತ್ತಿಲ್ಲ. ತಡವಾಗಿ ಕರ್ತವ್ಯಕ್ಕೆ ಹಾಜರಾಗಬಾರದು ಎಂದು ಸರಿಯಾಗಿ ಊಟ ಸಹ ಮಾಡದೆ ಬಸ್ ನಿಲ್ದಾಣಕ್ಕೆ ಓಡೋಡಿ ಬರುವ ಪ್ರಯಾಣಿಕರಿಗೆ ಗಂಟೆ ಗಟ್ಟಲೆ ಬಸ್ ಗಾಗಿ ಕಾಯುವ ಕರ್ಮ ಬಂದಿರೋದು ವಿಪರ್ಯಾಸವೆ ಸರಿ.
ಹೌದು ನವಲಗುಂದ ಬಸ್ ನಿಲ್ದಾಣದಲ್ಲಿ ಬಸ್ ಗಳ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಕಾದು ಕಾದು ಸುಸ್ತಾಗುತ್ತಿದ್ದಾರೆ. ಬಂದ ಬಸ್ ಅನ್ನು ಬೆನ್ನಟ್ಟಿ ನೂಕು ನುಗಲಿನಲ್ಲಿ ಹತ್ತುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದ ಸ್ಥಳೀಯರಿಗೆ ಏನಾದರೂ ಅವಘದ ಸಂಭವಿಸಿದರೆ ಹೇಗಪ್ಪಾ ಅನ್ನೋ ಆತಂಕ ದಟ್ಟವಾಗಿ ಕಾಡುತ್ತಿದೆ.
ಈ ಬಗ್ಗೆ ನವಲಗುಂದ ಘಟಕ ವ್ಯವಸ್ಥಾಪಕರು ಗಮನ ಹರಿಸಿ, ಹೆಚ್ಚುವರಿ ಬಸ್ ನ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಏನಾದರೂ ಅವಘದ ಸಂಭವಿಸಿದರೆ ಅದಕ್ಕೆ ಘಟಕ ವ್ಯವಸ್ಥಾಪಕರೇ ಹೊಣೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Kshetra Samachara
11/04/2022 11:38 am