ಹುಬ್ಬಳ್ಳಿ: ರೈಲ್ವೆಯಲ್ಲಿ ಸುಮಾರು ಜನ ಭಿಕ್ಷೆ ಬೇಡುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭಿಕ್ಷುಕ ತನ್ನ ಸಾಮಾಜಿಕ ಜವಾಬ್ದಾರಿಯ ಜೊತೆಗೆ ತನ್ನ ಕಾಯಕವನ್ನು ಮಾಡುತ್ತಿದ್ದಾನೆ.
ಹೌದು..ರೈಲು ಹಾಗೂ ರೈಲು ನಿಲ್ದಾಣದಲ್ಲಿ ಹತ್ತು ಹಲವಾರು ಜನ ನಿರ್ಗತಿಕರು ತಮ್ಮ ಹೊಟ್ಟೆ ಪಾಡಿಗೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಆದರೆ ಈ ವ್ಯಕ್ತಿ ರೈಲ್ವೆ ಬೋಗಿಯಲ್ಲಿರುವ ಕಸವನ್ನು ಬಟ್ಟೆಯಿಂದ ಸ್ವಚ್ಚ ಮಾಡಿ ಬಳಿಕ ಪ್ಲಾಸ್ಟಿಕ್ ಹಾಗೂ ಕಸವನ್ನು ಬೇರ್ಪಡಿಸಿ ಕಸದ ಡಬ್ಬಿಯಲ್ಲಿ ಹಾಕುವ ಮೂಲಕ ಸ್ವಚ್ಚ ಭಾರತದ ಕನಸನ್ನು ಸಾಕಾರಗೊಳಿಸುತ್ತಿದ್ದಾನೆ. ರೈಲ್ವೇ ಬೋಗಿಯನ್ನು ಸ್ವಚ್ಚಗೊಳಿಸಿದ ನಂತರ ಪ್ರಯಾಣಿಕರಲ್ಲಿ ಒಂದು ರೂಪಾಯಿ ಎರಡು ರೂಪಾಯಿ ಪಡೆದುಕೊಂಡು ತನ್ನ ಜೀವನ ನಡೆಸುತ್ತಿದ್ದಾನೆ.
ತನ್ನ ಬಟ್ಟೆ ಕೊಳೆಯಾಗಿದ್ದು, ತಾನೇ ಭಿಕ್ಷೆ ಬೇಡಿಕೊಂಡು ತಿನ್ನುತ್ತಿದ್ದರೂ ಪ್ರಯಾಣಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾನೆ. ರೈಲಿನಲ್ಲಿ ದೊರೆಯುವ ಚಿಪ್ಸ್, ಬಿಸ್ಕತ್ತು ಪ್ಯಾಕೆಟ್ ಎಲ್ಲೆಂದರಲ್ಲಿ ಎಸೆಯುವ ಪ್ರಯಾಣಿಕರಿಗೆ ಈತನ ಕಾರ್ಯ ನಿಜಕ್ಕೂ ಒಂದು ಪಾಠವಾಗಿದೆ.
ಒಟ್ಟಿನಲ್ಲಿ ಈತನ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಕಸ ಮುಕ್ತ ರೈಲ್ವೆ ಬೋಗಿಯನ್ನಾಗಿ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದುಕೊಂಡ ವ್ಯಕ್ತಿಯ ಕಾರ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/04/2022 12:34 pm