ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹ್ಯಾಂಗ ಜೀವನ ಮಾಡಬೇಕು ಹೇಳ್ರಿ: ಸಮಸ್ಯೆಗಳ ಸರಮಾಲೆಯಾಗಿದೆ ಕಾಲವಾಡ ಗ್ರಾಮದ ಸ್ಥಿತಿ

ಹುಬ್ಬಳ್ಳಿ: ಅವರೆಲ್ಲ ಹಳ್ಳಿಯ ಸ್ವಚ್ಛಂದ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆಯಲ್ಲಿದ್ದವರು. ಹಳ್ಳಿಯ ಸೊಬಗಿನಲ್ಲಿ ನಿಟ್ಟುಸಿರು ಬಿಟ್ಟು ಜೀವನ ನಡೆಸಬೇಕು ಎಂದುಕೊಂಡಿದ್ದವರು. ಆದರೆ ಹಳ್ಳಿ ಜೀವನವೇ ಬೇಸರ ಮೂಡಿಸುವಂತಾಗಿದ್ದು,ಈ ಹಳ್ಳಿಯ ಕಷ್ಟ ನೋಡಿದರೆ ಎಂತವರಿಗೂ ಮರುಕ ಹುಟ್ಟುವುದು ಖಂಡಿತ.ಅಷ್ಟಕ್ಕೂ ಯಾವುದು ಆ ಹಳ್ಳಿ ಅಂತೀರಾ ನೀವೆ ನೋಡಿ...

ಹೀಗೆ ಕೆಸರಲ್ಲಿ ಕಾಲಿಟ್ಟುಕೊಂಡು ಕೈಯಲ್ಲಿ ಜೀವ ಹಿಡಿದುಕೊಂಡು ನಡೆದಾಡುತ್ತಿರುವ ಗ್ರಾಮಸ್ಥರು, ಎಲ್ಲೆಂದರಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿರುವ ಊರಿನ ಹೆಸರು ಕಾಲವಾಡ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಈ ಗ್ರಾಮಕ್ಕೆ ಹೋಗಲು ಕೂಡ ಸಾರ್ವಜನಿಕರು ಹಿಂದೇಟು ಹಾಕುತ್ತಾರೆ.ಚುನಾವಣೆಗೆ ಒಮ್ಮೆ ಬರುವ ಭರವಸೆ ಮಾತುಗಳನ್ನು ಗ್ರಾಮಸ್ಥರು ನಂಬಿಕೊಂಡು ಅಭಿವೃದ್ಧಿ ಎದುರು ನೋಡುತ್ತಿದ್ದಾರೆ.

ನಡೆದಾಡಲು ರಸ್ತೆ ಇಲ್ಲ,ಕುಡಿಯೋಕೆ ಶುದ್ಧವಾದ ನೀರಿಲ್ಲ,ಕರೆಂಟ್ ಸಮಸ್ಯೆಯಂತೂ ಹೇಳ ತೀರದಾಗಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಮಸ್ಯೆಗಳ ಮಧ್ಯೆ ಹೇಗೆ ಜೀವನ ನಡೆಸಬೇಕು ಎಂಬುವಂತ ಮಾತುಗಳು ಅಲ್ಲಿನ ಜನರ ಬವಣೆ ತೆರೆದಿಟ್ಟಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದೆಷ್ಟೋ ಯೋಜನೆ ಜಾರಿಗೊಳಿಸಿದರು ಕೂಡ ಈ ಗ್ರಾಮಕ್ಕೆ ಮಾತ್ರ ನಯಾಪೈಸೆ ಉಪಯೋಗವಾಗಿಲ್ಲ. ಅಲ್ಲದೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ಗಮನ ಕೊಟ್ಟಿಲ್ಲ. ಬೆಳಿಗ್ಗೆ ಏಳುವಾಗಲೇ ಸಮಸ್ಯೆ ಮುಖ ನೋಡಿ ದಿನ ಪ್ರಾರಂಭಿಸಬೇಕಿದೆ.

ಒಟ್ಟಿನಲ್ಲಿ ಕಾಲವಾಡ ಗ್ರಾಮದ ಜನರ ಕಷ್ಟವಂತೂ ಹೇಳ ತೀರದಾಗಿದೆ.ಇನ್ನೆನೂ ಗ್ರಾಮ ಪಂಚಾಯತಿ ಚುನಾವಣೆ ಬಂದಿದ್ದು,ಈಗ ಸ್ವಲ್ಪ ಆಶ್ವಾಸನೆ ಮಾತುಗಳು ಕೇಳಿ ಬರುತ್ತವೆ, ಆದರೆಕೆಲಸ ಮಾತ್ರ ಶೂನ್ಯವಾಗಿದೆ.

Edited By : Manjunath H D
Kshetra Samachara

Kshetra Samachara

07/10/2020 12:21 pm

Cinque Terre

35.77 K

Cinque Terre

4

ಸಂಬಂಧಿತ ಸುದ್ದಿ