ಹುಬ್ಬಳ್ಳಿ: ನಮಸ್ಕಾರ ರೀ ಪಬ್ಲಿಕ್ ನೆಕ್ಸ್ಟ್ ವೀಕ್ಷಕರಿಗೆ. ನೋಡ್ರಿ ಇಷ್ಟು ದಿನ ಹುಬ್ಬಳ್ಳಿ ಸಮಸ್ಯೆ ನೋಡಿದ್ರಿ. ಈಗ ಹುಬ್ಬಳ್ಳಿ ತಾಲೂಕಿನ್ಯಾಗ ಮಳೆಗಾಲದಾಗ ಜನರು ಅನುಭವಿಸುವ ಸಮಸ್ಯೆ ತೋರಸ್ತೀವಿ ನೋಡ್ರಿ. ಅಂದ ಹಾಗೆ ಯಾವ ಊರಿನ ಸಮಸ್ಯೆ ಇದು ಅಂತೀರಾ ಬರ್ರಿ ಹೋಗೊಣ ನಿಮಗೆ ಗೊತ್ತಾಗುತ್ತೇ ಯಾವ ಊರು ಏನ ಸಮಸ್ಯೆ ಅಂತ...
ಇದು ನಮ್ಮ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮ ನೋಡ್ರಿ. ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿ ಇರೋ ಊರನ್ಯಾಗ ಮಳೆ ಬಂದರೇ ರಸ್ತೆ ಎಲ್ಲಾ ಕೆರಿ ಆದಂಗ ಆಗ್ತಾವು. ಇಲ್ಲಿನ ನಡೆದುಕೊಂಡು ಹೋದರೇ ಮನೆ ಮುಟ್ಟಲು ಸಾಧ್ಯವಿಲ್ಲ ಈ ಗುಂಡಿಯಲ್ಲಿ ಈಜಾಡಿಕೊಂಡ ಹೋಗಬೇಕು ನೋಡ್ರಿ. ಹೌದ..ಹೌದ.. ಈ ಮಾತ ಕರೆ ಐತಿ ನೋಡ್ರಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಾಗ ಜನರಿಗೆ ಓಡಾಡೋಕೆ ಸರಿಯಾದ ರಸ್ತೆ ಇಲ್ಲ. ರಸ್ತೆ ಇದ್ದರೂ ಗುಂಡಿ ಬಿದ್ದು ಯಾವ ಹೊತ್ತಿನಲ್ಲಿ ನಾವು ಈ ತಗ್ಗಿನ್ಯಾಗ ಬಿಳ್ತಿವೋ ಅನ್ನೋ ಭಯದಾಗ ಜನರು ಓಡಾಡ್ತಿದ್ದಾರೆ ನೋಡ್ರಿ.
ಶಾಲೆ ಕಾಲೇಜಿನಿಂದ ಬರುವ ವಿದ್ಯಾರ್ಥಿಗಳು ಹರ ಸಾಹಸಪಟ್ಟು ಮನೆಗೆ ಹೋಗುವಂಗ ಆಗೈತಿ. ಇನ್ನ ವೃದ್ಧರ ಸಮಸ್ಯೆ ಅಂತೂ ಕೇಳಾಕ ಹೋಗಬ್ಯಾಡ್ರಿ ಎದ್ನೋ ಬಿದ್ನೋ ಅಂತ ಮನೆ ಸೇರುವಂಗ ಆಗೈತಿ.
ಒಟ್ಟಿನ್ಯಾಗ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಗೆ ಮಳೆಗಾಲದಾಗ ಬಂದರೇ ಬ್ಯಾಸರಾಗಿ ಹೋಗವಂಗ ಆಗೈತಿ. ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ಈ ಸಮಸ್ಯೆಗೆ ಮುಕ್ತಿ ನೀಡಬೇಕು ನೋಡ್ರಿ.
Kshetra Samachara
10/07/2022 04:37 pm