ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಸರ್ಪದ ಕಾಟ ಅತಿಯಾಗಿ ಕಾಡ ತೊಡಗಿದೆ. ಈ ಹಿಂದೆ ಕೆರೆ ಸುತ್ತ ಬೆಳೆದ ಕಸದ ನಿರ್ವಹಣೆ ಕಾರಣ ಹಾವುಗಳು ವಾಸಗಿರಬಹುದೆಂದು ಗ್ರಾಮಸ್ಥರು ಪಂಚಾಯ್ತಿ ಸಹಕಾರದಲ್ಲಿ ಕರೆ ಸ್ವಚ್ಚತೆ ಮಾಡಿಸಿ ನೈರ್ಮಲ್ಯ ಕಾಪಾಡಿದ್ರೂ ಹಾವುಗಳ ಕಾಟ ಕಡಿಮೆಯಾಗಿಲ್ಲ.
ಈ ಹಿಂದೆ ವ್ಯಕ್ತಿಯೊರ್ವ ಕೆರೆಗೆ ನೀರಿಗೆ ಹೋದಾಗ ಹಾವು ಕಡಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೇ ಕೆರೆ ಸ್ವಚ್ಚವಾದ್ರೂ, ಈ ಜೋಡಿ ಸರ್ಪಗಳು ತಳಕು ಹಾಕಿಕೊಳ್ಳುವುದು, ಜನರ ಭಯವಿಲ್ಲದೆ ನೀರಲ್ಲಿ ಓಡಾಡುವುದಕ್ಕೆ ಗ್ರಾಮಸ್ಥರು ಭಯ ಮಡುವಿನಲ್ಲಿ ಮುಳುಗಿದ್ದಾರೆ.
ಒಟ್ಟಾರೆ ಹಾವುಗಳ ಓಡಾಟದಿಂದ ಚಿಕ್ಕ ಮಕ್ಕಳು, ಮಹಿಳೆಯರು ಕೆರೆಗೆ ನೀರಿಗೆ ಹೋಗುವುದನ್ನೇ ಬಿಟ್ಟಿದ್ದು ಗ್ರಾಮಸ್ಥರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
Kshetra Samachara
02/12/2020 09:18 pm