ಹುಬ್ಬಳ್ಳಿ- ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಆಯ ತಪ್ಪಿದರೆ ಸೊಂಟ,ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ.....
ಹೌದು, ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿರುವ ಜಯನಗರ ರಸ್ತೆಯ ಅವತಾರ. ಅಲ್ಲಿನ ನಿವಾಸಿಗಳು ಗುಂಡಿಗಳಲ್ಲಿ ನಿಲ್ಲುವ ಮೂಲಕ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆಯಾದರೆ ಸಾಕು ನೀರು ಮನೆಗೆ ನುಗ್ಗುತ್ತದೆ. ಇನ್ನು ಸಿಕ್ಕ ಸಿಕ್ಕಲ್ಲಿ ತೆಗ್ಗು ಗುಂಡಿಗಳಿಂದ ದಾರಿಯಲ್ಲಿ ನರಕದೃಶ್ವಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಕಿಮ್ಸ್ ಆಸ್ಪತ್ರೆಗೆ, ಕೋರ್ಟ್ ಗೆ ಮತ್ತು ಜನರು ತಮ್ಮ ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಇನ್ನು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೇ ವಾಹನ ಸವಾರರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಪರಾಕಾಷ್ಠೆ ಬಿಟ್ಟು ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು ಎಂದು ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ವಿನಂತಿಸಿದ್ದಾರೆ.....
Kshetra Samachara
27/09/2020 01:56 pm