ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಕರೆ ಹುಷಾರ್ ನಿಮ್ಮ ಮಕ್ಕಳನ್ನು ಪಾಲಕೆ ಗಾರ್ಡನ್ ದಲ್ಲಿ ಆ‌ಟ ಆಡಲು ಬಿಡಬೇಡಿ

ಹುಬ್ಬಳ್ಳಿ- ನಿಮ್ಮ ಮಕಳ್ಳನ್ನು ಹುಬ್ಬಳ್ಳಿಯ ಪಾಲಿಕೆಯ ಕಚೇರಿಯ ಪಕ್ಕದಲ್ಲಿರುವ ಗಾರ್ಡನ್ ಗೆ ಆಟ ಆಡಲು ಕರೆದುಕೊಂಡು ಹೋಗ್ತೀರಾ ಹಾಗಾದ್ರೆ ಸ್ವಲ್ಪ ಹುಷಾರಾಗಿರಿ...

ಹೌದು, ಪಾಲಿಕೆಯ ಕಚೇರಿಯ ಪಕ್ಕದಲ್ಲಿ ಇರುವ ಉದ್ಯಾನವನದಲ್ಲಿ ಮರವೊಂದನ್ನು ಕಡಿದು ಅಲ್ಲಿಯೇ ಬಿಟ್ಟಿದ್ದಾರೆ,ಆದ್ರೆ ಪೂರ್ತಿಯಾಗಿ ಮರವನ್ನು ಅಲ್ಲಿಂದ ತೆರವು ಗೊಳಿಸಿಲ್ಲ, ಹೀಗಾಗಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮರವೂ ಕೂಡಾ ವಾಲಿ ಬಿಟ್ಟಿದೆ. ಯಾವಾಗ ಯಾರ್ ಬಲಿಯನ್ನು ತೆಗೆದುಕೊಳ್ಳುತ್ತೋ ಎಂಬಂತಾಗಿದೆ.

ಇನ್ನು ಈ ಉದ್ಯಾನವನದಲ್ಲಿ ಪ್ರತಿ ದಿನ ನೂರಾರು ಮಕ್ಕಳು ಆಡಲು ಬರುತ್ತಾರೆ, ಜೊತೆಗೆ ಪಕ್ಕದಲ್ಲಿಯೇ ಸರ್ಕಾರಿ ಆಸ್ಪತ್ರೆ ಇರೋದರಿಂದ ಸಾಕಷ್ಟು ಜನ ರೋಗಿಯ ಸಂಬಂಧಿಕರು ಇಲ್ಲೇ ಬಂದು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳ ಇದಾಗಿದ್ರು ಕೂಡಾ, ಯಾರೊಬ್ಬರೂ ಇತ್ತ ಗಮನ ಕೂಡಾ ಹರಿಸಿಲ್ಲ.

ಇನ್ನು ಪಾಲಿಕೆಯ ಕಮೀಷನರ್ ಕಚೇರಿಯ ಪಕ್ಕದಲ್ಲಿಯೇ ಈ ರೀತಿಯಾದ ಪರಿಸ್ಥಿತಿ ಇದ್ದರೆ, ಅದೇ ಇನ್ನ ಅವಳಿ ನಗರದ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಿದೆ....

Edited By : Nagesh Gaonkar
Kshetra Samachara

Kshetra Samachara

23/09/2020 03:22 pm

Cinque Terre

40.98 K

Cinque Terre

2

ಸಂಬಂಧಿತ ಸುದ್ದಿ