ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಕುಂದಗೋಳದ ನೂತನ ಪಶು ಆಸ್ಪತ್ರೆಯಲ್ಲೇ ಜಾನುವಾರುಗಳಿಗೆ ಚಿಕಿತ್ಸೆ

ಕುಂದಗೋಳ: ತಾಲೂಕಿನ ಸಮಸ್ತ ರೈತ ಬಾಂಧವರೇ ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ ಕೇಳ್ರಿ.

ರೈತಾಪಿ ಜನರೇ ನಿಮ್ಮ ಜಾನುವಾರುಗಳಿಗೆ ಯಾವುದೇ ರೋಗಕ್ಕೆ ಚಿಕಿತ್ಸೆ ನೀಡಲು ಕುಂದಗೋಳದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೋಲ್ ಇಂಡಿಯಾ ಲಿಮಿಟೆಡ್ ಇವರ ಸಹಯೋಗದಲ್ಲಿ ನಿರ್ಮಾಣವಾದ ನೂತನ ಪಶು ಆಸ್ಪತ್ರೆ ಸಜ್ಜಾಗಿ ಈಗಾಗಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಕಾರ್ಯ ಆರಂಭಿಸಿದೆ.

ಕಳೆದ ತಿಂಗಳ ಹಿಂದೆ ಪಶು ಆಸ್ಪತ್ರೆಯನ್ನು ಕೇಂದ್ರ ಸಚಿವರೇ ಉದ್ಘಾಟನೆ ಮಾಡಿದ್ರೂ, ನೂತನ ಪಶು ಆಸ್ಪತ್ರೆ ಉಪಯೋಗಕ್ಕೆ ಇರದೆ ಕೀಲಿ ಹಾಕಿದ ಪರಿಣಾಮ ಹಳೇ ಪಶು ಆಸ್ಪತ್ರೆ ಕಟ್ಟಡದಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿದ ಪರಿಣಾಮ ಇದೀಗ ನೂತನ ಆಸ್ಪತ್ರೆ ಬಾಗಿಲು ತೆರೆದು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದೆ.

ಇದರಿಂದ ರೈತಾಪಿ ಜನರು ಸಂತೋಷ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಹಾಗೂ ನೂತನ ಪಶು ಆಸ್ಪತ್ರೆಯಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಾರೆ ಪಬ್ಲಿಕ್ ನೆಕ್ಸ್ಟ್ ವರದಿ ಪರಿಣಾಮ ನೂತನ ಪಶು ಆಸ್ಪತ್ರೆ ಉದ್ಘಾಟನೆ ಮತ್ತು ಉಪಯೋಗ ಆರಂಭವಾಗಿದೆ.

Edited By : Manjunath H D
Kshetra Samachara

Kshetra Samachara

09/04/2022 09:57 pm

Cinque Terre

29.48 K

Cinque Terre

0

ಸಂಬಂಧಿತ ಸುದ್ದಿ