ಹುಬ್ಬಳ್ಳಿ: ಕೋವಿಡ್ ನ ಮೊದಲ ಹಾಗೂ ಎರಡನೇ ಅಲೆಯಲ್ಲಿ ಧಾರವಾಡ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಹೀಗಿದ್ದರೂ ಆರೋಗ್ಯ ಸಚಿವರು, ಸಿಎಂ ಧಾರವಾಡ ಜಿಲ್ಲೆಗೆ ಸಾಕಷ್ಟು ಬಾರಿ ಬಂದರೂ ಹುಸಿ ಆಶ್ವಾಸನೆ ನೀಡಿ ಹೋಗುತ್ತಿದ್ದಾರೆ. ಆದರೆ ಇಲ್ಲಿನ ಸಮಸ್ಯ ಮಾತ್ರ ಪರಿಹಾರವಾಗಿಲ್ಲ. ಹಾಗಿದ್ದರೇ ಇಲ್ಲಿ ಆಗಿರುವ ಸಮಸ್ಯೆ ಆದರೂ ಏನು ಅಂತೀರಾ ತೋರಸ್ತೀವಿ ನೋಡಿ..
ಧಾರವಾಡ ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿಯೇ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಸೇವೆ ಸಿಗದೇ ಜನರ ಪರದಾಟ ನಡೆಸುವಂತಾಗಿದೆ. ಹೀಗಿದ್ದರೂ ಸಚಿವರು ಮಾತ್ರ ಜಿಲ್ಲೆಗೆ ಬಂದಾಗ ಹುಸಿ ಭರವಸೆ ನೀಡಿ ಕಾಲು ಕೀಳುತ್ತಾರೆ ವಿನಃ ಯಾರೊಬ್ಬರೂ ಸಮಸ್ಯೆ ಬಗೆಹರಿಸಲು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಸಚಿವರ ಹಾಗೂ ಸರ್ಕಾರ ನಡೆಯಿಂದ ಜನರು ಹಿಡಿಶಾಪ ಹಾಕುವಂತಾಗಿದೆ.
ಇನ್ನೂ ಜಿಲ್ಲೆಯಲ್ಲಿ 1024 ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಅರ್ಧಕ್ಕಿಂತ ಹೆಚ್ಚಿನ ಸಿಬ್ಬಂದಿ ಕೊರತೆಗೆ ಧಾರವಾಡ ಜಿಲ್ಲೆ ಸಾಕ್ಷಿಯಾಗಿದೆ. ಕೇವಲ 757 ಸಿಬ್ಬಂದಿ ಮಾತ್ರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ 267 ಸಿಬ್ಬಂದಿ ನೇಮಕಾತಿಗೆ ಆದೇಶವೇ ಇಲ್ಲದಂತಾಗಿದೆ. ಗುತ್ತಿಗೆ ಆಧಾರದಲ್ಲಿಯೂ ನೇಮಕಾತಿ ವಿಳಂಬವಾಗಿದ್ದು, ಸರಿಯಾದ ಚಿಕಿತ್ಸೆ ಸಿಗದೇ ಜನರು ಪರದಾಡುವಂತಾಗಿದೆ. ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ. ಜಿಲ್ಲೆಯಲ್ಲಿ 53 ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. 32 ಗ್ರಾಮೀಣ, 21 ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ವಿಪರ್ಯಾಸಕರ ಸಂಗತಿ ಎಂದರೇ ಅರ್ಧದಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಮ್‌ಬಿಬಿಎಸ್ ವೈದ್ಯರೇ ಇಲ್ಲವಾಗಿದ್ದು, ಜನರು ಅಕ್ಷರಶಃ ಸಂಕಷ್ಟ ಅನುಭವಿಸುವಂತಾಗಿದೆ.
ಒಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇಷ್ಟು ಸಮಸ್ಯೆಗಳಿದ್ದರೂ ಸರ್ಕಾರ ಹಾಗೂ ಸಚಿವರು ಯಾವುದೇ ಕಾಳಜಿ ವಹಿಸದೇ ಇರುವುದು ಚಿಂತಾಜನಕ ಸಂಗತಿಯಾಗಿದೆ.
Kshetra Samachara
26/01/2022 01:33 pm