ಹುಬ್ಬಳ್ಳಿ: ಒಂದೆಡೆ ಕೋವಿಡ್ ರೂಪಾಂತರಿ ವೈರಸ್ ತಲ್ಲಣ ಮೂಡಿಸುತ್ತಿರುವಾಗಲೇ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ವೈದ್ಯರು ಪ್ರತಿಭಟನೆ ನಡೆಸಿದರು.
ನಗರದ ಕಿಮ್ಸ್ ಎದುರು ಪ್ರತಿಭಟನೆ ನಡೆಸಿದ ವೈದ್ಯರು, 6 ತಿಂಗಳ ಕೋವಿಡ್ ಅಲೈನ್ಸ್ ಸೇರಿದಂತೆ ಕೌನ್ಸಲಿಂಗ್ ಮಾಡಬೇಕು ಹಾಗೂ ಸ್ನಾತಕೋತ್ತರ ಶುಲ್ಕ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಆರು ತಿಂಗಳು ಕಳೆದರು ಕೋವಿಡ್ ಭತ್ಯ ನೀಡಿಲ್ಲ ಮತ್ತು ಶುಲ್ಕ ಕಡಿಮೆ ಮಾಡಿಲ್ಲ. ಸಚಿವ ಸುಧಾಕರ್ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈವರೆಗೂ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದು, ಬೇಡಿಕೆ ಈಡೇರಿವವರೆಗೂ ಪ್ರತಿಭಟನೆ ಕೈಬಿಡುವದಿಲ್ಲ ಎಂದು ಎಚ್ಚರಿಕೆ ನೀಡಿದರು.
Kshetra Samachara
30/11/2021 12:16 pm