ಕುಂದಗೋಳ : ಈ ಮನುಷ್ಯರಿಗೆ ಕೊರೊನಾ ಒಂದನೇ ಅಲೆ ಎರಡನೇ ಅಲೆ ಕಾಟ ಹೇಗೆ ಬೆನ್ನಟ್ಟಿದೆಯೋ ಅದೇ ರೀತಿ ಈ ರಾಸುಗಳಿಗೂ ಲಿಂಪ್ ಸ್ಕೀನ್ ರೋಗ ಮಾಸುವ ಮುನ್ನವೇ ಮತ್ತೀಗ ಕಂದು ರೋಗದ ಭೀತಿ ಭಯಂಕರವಾಗಿ ಕಾಡುತ್ತಿದೆ ಈ ರೋಗಕ್ಕೆ ಪೂರಕ ಸೂಕ್ತ ಚಿಕಿತ್ಸೆ ನೀಡಬೇಕಾದ ಪಶು ಆಸ್ಪತ್ರೆ ಉದ್ಘಾಟನೆ ಭಾಗ್ಯ ಕಾಣದೆ ಕೀಲಿ ಹಾಕಿಕೊಂಡಿದೆ.
ಮಾನ್ಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಅಮೃತ ಹಸ್ತದಿಂದ ಭೂಮಿ ಪೂಜೆ ಆದ ಸಿ.ಎಸ್.ಆರ್ ಯೋಜನೆಯ 98 ಲಕ್ಷ ಮೊತ್ತದ ಈ ಕಟ್ಟಡ ಆರಂಭದಲ್ಲಿ ಚಿರತೆ ವೇಗದಲ್ಲಿ ಕಾಮಗಾರಿ ಕೈಗೊಂಡು ಈದೀಗ ಉಧ್ವಾಟನೆ ಹಂತಕ್ಕೆ ಬಂದಾಗ ಆಮೆ ವೇಗ ತಾಳಿದ್ದು ಸುಸಜ್ಜೀತವಾಗಿ ಕಟ್ಟಡ ತಯಾರಾಗಿದ್ರೂ ಬಣ್ಣದ ಜೊತೆ ಉಧ್ವಾಟನೆ ಕಾಣದೆ ರೈತರಿಂದ ದೂರ ಉಳಿದಿದೆ.
ಈ ಪರಿಣಾಮ ಜಾನುವಾರುಗಳಿಗೆ ತಗುಲಿದ ವಿವಿಧ ರೋಗ ಕಂಡು ಆಸ್ಪತ್ರೆ ಅರಸಿ ಬರುವ ರೈತರಿಗೆ ಅದೇ ಹಳೇ ಕಟ್ಟಡದ ಪಕ್ಕದ ಮಲೀನ ಪರಿಸರದಲ್ಲೇ ಚಿಕಿತ್ಸೆ ಮುಂದುವರೆದಿದ್ದು, ಚಿಕಿತ್ಸೆ ತ್ಯಾಜ್ಯವನ್ನು ಮರದಡಿ ಎಸೆಯುವ ಪರಿಪಾಟಕ್ಕೆ ಉತ್ತರವೇ ಸಿಗದಾಗಿದೆ.
ಇದಲ್ಲದೆ ಈ ಮೊದಲಿದ್ದ ಹಳೇ ಪಶು ಆಸ್ಪತ್ರೆ ಕಟ್ಟಡದ ಪಿಠೋಪಕರಣ ಸಹ ಎಲ್ಲೇಂದರಲ್ಲಿ ಬಿದ್ದಿದ್ದು ಬಾಗಿಲು, ಖುರ್ಚಿ, ಕಿಟಕಿ, ಮೇಲ ಹಾಸು ಹಂಚುಗಳು ಬಿದ್ದಲ್ಲಿಯೆ ಕೊಳೆತು ಹೋಗುತ್ತಿದ್ದು ಮೇಲಾಧಿಕಾರಿಗಳು ಈ ವಸ್ತುಗಳಿಗೆ ರಕ್ಷಣೆ ಇಲ್ಲವೇ ಹರಾಜು ಭಾಗ್ಯ ಕಲ್ಪಿಸಬೇಕಾಗಿದೆ.
ಒಟ್ಟಾರೆ ಕುಂದಗೋಳದ ರೈತರಿಗೆ ಕೇಂದ್ರ ಸಚಿವರು ನೀಡಿದ ನೆನಪಿನ ಕೊಡುಗೆ ತಾಲೂಕು ಪಶು ಆಸ್ಪತ್ರೆ ಕಟ್ಟಡಕ್ಕೆ ಆದಷ್ಟು ಶೀಘ್ರ ಉಧ್ವಾಟನೆ ಭಾಗ್ಯ ಒದಗಿ ರಾಸುಗಳ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
06/10/2021 01:50 pm