ಕುಂದಗೋಳ : ಈ ಸರ್ಕಾರಿ ಆಸ್ಪತ್ರೆಗಳಿಗೆ ಯಾರೇ ಹೋದ್ರು ಒಂದೇ ಗೋಳು, ವೈದ್ಯರು ವೈದ್ಯಕೀಯ ಸೌಲಭ್ಯ ಎರೆಡೂ ಸರಿಯಿಲ್ಲಾ, ಸೂಕ್ತ ಚಿಕಿತ್ಸೆ ದೊರಯಲಿಲ್ಲ ಎಂಬುದು.
ಇದೀಗ ಈ ಸಾಲಿಗೆ ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಹ ಹೊರತಾಗಿಲ್ಲ.
ಯಾಕಪ್ಪ ? ಅಂದ್ರಾ, ಅಂತಹದೊಂದು ಘಟನೆ ನಿನ್ನೆ ಭಾನುವಾರ ದಿನ ಈ ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಆಸ್ಪತ್ರೆಗೆ ಬಂದಂತಹ ಜನರಿಗೆ ಸ್ಪಂದಿಸಲು ಅಲ್ಲೋಬ್ರೂ ಸೂಕ್ತ ವೈದ್ಯಕೀಯ ಸಿಬ್ಬಂದಿಗಳೇ ಇಲ್ಲಾ.
ಇನ್ನು ತುಂಬು ಗರ್ಭಿಣಿ ನೋವಿನಿಂದ ಆಸ್ಪತ್ರೆಗೆ ಬಂದ್ರೇ ಅವಳಿಗೆ ಚಿಕಿತ್ಸೆ ಮೊದಲು ವೈದ್ಯರು ವಾಕಿಂಗ್ ಮಾಡಲು ಹೇಳಿದ್ದ ವೈದ್ಯರು ಅರ್ಧ ಗಂಟೆ ಕಳದ್ರೂ ಆಸ್ಪತ್ರೆ ಕಡೆ ಸುಳಿದಿಲ್ಲ.
ಇನ್ನೂ ಜ್ವರ ಬಂದ್ ವ್ಯಕ್ತಿಗೆ ಪೋನ್ ಕಾಲ್ ಮೇಲೆ ಡಾಕ್ಟರ್ ಟ್ಯಾಬ್ಲೆಟ್ ನೀಡಿ ಎಂದಿದ್ದಾರೆ. ಸಾರ್ವಜನಿಕರು ಹೇಳೋ ಪೈಕಿ ಡಾಕ್ಟರ್ ವೃತ್ತಿ ಮುಗಿಸಿ ಮನೆಗೆ ಹೋದ್ರೆ ವೈದ್ಯಕೀಯ ಸಿಬ್ಬಂದಿಗಳು ಸಹ ಅದೇ ದಾರಿ ಹಿಡಿದೂ ಬಿಡ್ತಾರಂತೆ ನಿನ್ನೆ ಸಂಜೆ 4 ಗಂಟೇಯಿಂದ ರಾತ್ರಿ 7-30 ರ ವರೆಗೂ ಆಸ್ಪತ್ರೆಯಲ್ಲಿ ಕೇವಲ ರೋಗಿ ರೋಗಿಯ ಸಂಬಂಧಿಗಳು ವೈದ್ಯರಿಗಾಗಿ ಕಾಲೆ ಕಳೆದು ಸುಸ್ತಾಗಿ ಹೋಗಿದ್ದಾರೆ.
ಈ ಬಗ್ಗೆ ಸಾರ್ವಜನಿಕರೊಬ್ಬರು ಪಬ್ಲಿಕ್ ನೆಕ್ಸ್ಟ್ ಘಟನೆಯ ವಿಡಿಯೋ ಕಳುಹಿಸಿ ಕರೆ ಮಾಡಿ ಏನು ಹೇಳಿದ್ರೂ ನೀವೆ ಕೇಳಿ.
ಕೇಳಿದಲ್ಲಾ.. ಇನ್ನು ಆಸ್ಪತ್ರೆಗೆ ಬಂದ ರೋಗಿ ಹಾಗೂ ರೋಗಿಯ ಸಂಬಂಧಿಕರ ಬಾಯಲ್ಲೇ ಆಸ್ಪತ್ರೆಯ ಸ್ಥಿತಿ ಗತಿ ಏನಾಗಿದೆ ಕೇಳಿ.
ಒಟ್ಟಾರೆ ಹಳ್ಳಿಗರ ಆರೋಗ್ಯ ಕಾಳಜಿಗೆ ಸರಿಯಾದ ಸಮಯಕ್ಕೆ ನೆರವಾಗಬೇಕಾದ ಆಸ್ಪತ್ರೆ ವೈದ್ಯರೇ ಹೀಗೆ ಮಾಡಿದ್ರೆ ಹೇಗೆ ? ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
15/02/2021 10:21 pm