ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದು ನಿಂತ ಹುಬ್ಬಳ್ಳಿ ಸರ್ಕಾರಿ ಆಸ್ಪತ್ರೆ

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆ ಅಂದ್ರೆ ಜನ ಹೆದರುತ್ತಾರೆ ಯಾಕಂದ್ರೆ ಸರಿಯಾದ ಚಿಕಿತ್ಸೆ ಸಿಗೋದಿಲ್ಲ ಅನ್ನೋರೇ ಹೆಚ್ಚು. ಆದ್ರೆ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗಿಂತ ಏನು ಕಡಿಮೆ ಇಲ್ಲ ಎನ್ನುವಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಕೊರೊನಾದ ಬಳಿಕ ಜನ ಈ ಆಸ್ಪತ್ರೆಯತ್ತ ಮುಗಿ ಬೀಳಲಾರಂಭಿಸಿದ್ದಾರೆ.

ಹೌದು, ಹೀಗೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸುಸಜ್ಜಿತ ಕಟ್ಟಡ, ಸ್ವಚ್ಚತೆ ಮತ್ತು ಚಿಕಿತ್ಸೆಯಿಂದಲೇ ಜನರ ಮೆಚ್ಚುಗೆ ಪಡೆಯುತ್ತಿದೆ ಹುಬ್ಬಳ್ಳಿ ನಗರದ ಚಿಟಗುಪ್ಪಿ ಆರೋಗ್ಯ ಕೇಂದ್ರ. ಪ್ರತಿ ಕೊಠಡಿಯನ್ನು ನಿತ್ಯವೂ ಸ್ವಚ್ಛಗೊಳಿಸಲಾಗುತ್ತಿದ್ದು, ಆಸ್ಪತ್ರೆಯ ಮೊದಲ ಮಹಡಿಯ ಸುತ್ತಲೂ ರಾಷ್ಟ್ರ ಕವಿಗಳ ಭಾವಚಿತ್ರಗಳನ್ನು ಹಾಕಲಾಗಿದೆ. ಇದು ಆಸ್ಪತ್ರೆಗೆ ಮತ್ತಷ್ಟು ಮೆರಗು ನೀಡಿದೆ. ಚಿಕಿತ್ಸೆಗೆ ಬರುವ ಜನರಲ್ಲಿ ಮತ್ತಷ್ಟು ಹೊಸ ಉತ್ಸಾಹ ಮೂಡಿಸಿದೆ. ಇದಲ್ಲದೇ ಉತ್ತಮ ಕಾರ್ಯ ಮಾಡಿದ ಸಿಬ್ಬಂದಿಗಳಿಗೆ ರಿವಾರ್ಡ್ ಕೂಡಾ ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಸೇರಿದಂತೆ ಉತ್ತಮ ರೀತಿಯ ಸಿಬ್ಬಂದಿಗಳು ಇದ್ದಾರೆ. ಹೀಗಾಗಿ ಡಾ.ಶ್ರೀಧರ ನೇತೃತ್ವದ ತಂಡ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.

ಈ ಮೊದಲು ಜನರು ಪ್ರತಿಯೊಂದಕ್ಕೂ ಕಿಮ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇದೀಗ ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರು ಚಿಟಗುಪ್ಪಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.‌ ಇದಲ್ಲದೇ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ವ್ಯಾಕ್ಸಿನೇಷನ್‌ ಮಾಡಿದ ಮೊದಲ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಈ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿರುವ ಕಾರಣ ಹುಬ್ಬಳ್ಳಿಯ ಹೆಚ್ಚು ಜನರು ಇದೇ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ಆಸ್ಪತ್ರೆಯಲ್ಲಿ ಸಿಗುತ್ತಿರುವ ಉತ್ತಮ ಚಿಕಿತ್ಸೆ ಹಾಗೂ ಸ್ವಚ್ಛತೆ ಬಗ್ಗೆ ರೋಗಿಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸರ್ಕಾರಿ ಆಸ್ಪತ್ರೆಗಳು ಎಂದರೆ ಈಗಿನ ಕಾಲದಲ್ಲಿ ಮೂಗುಮುರಿಯುವ ಜನರ ಮಧ್ಯೆ ಈ ಆಸ್ಪತ್ರೆ ಎಲ್ಲರ ಗಮನ ಸೆಳೆಯುತ್ತಿದೆ. ಯಾವ ನರ್ಸಿಂಗ್ ಹೋಮ್ ಗೂ ಕಡಿಮೆಯಿಲ್ಲದಂತೆ ಈ ಸರ್ಕಾರಿ ಆಸ್ಪತ್ರೆಯನ್ನು ನಿರ್ವಹಿಸಲಾಗುತ್ತಿದ್ದು, ಹೀಗಾಗಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/04/2022 03:11 pm

Cinque Terre

59.18 K

Cinque Terre

19

ಸಂಬಂಧಿತ ಸುದ್ದಿ