ಹುಬ್ಬಳ್ಳಿ: ಅದು ಇಡಿ ಉತ್ತರ ಕರ್ನಾಟಕ ಭಾಗದ ಜನರ ಸಂಜೀವಿನಿ. ಅದೆಷ್ಟೋ ಜನರ ಜೀವನಾಡಿಯಾಗಿರೋ ಆ ಆಸ್ಪತ್ರೆಯ ಆವರಣದಲ್ಲಿ ಹೆರಿಗೆ ಹಾಗೂ ನವಜಾತ ಶಿಶುಗಳ ಆರೈಕೆ ಉದ್ದೇಶದಿಂದ ಬಹುಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಕೈಗೊಳ್ಳಲಾಗಿದೆ. ಕಳೆದ ಆಗಷ್ಟ್ ತಿಂಗಳಲ್ಲೇ ಸಾರ್ವಜನಿಕರಿಗೆ ಮುಕ್ತವಾಗಬೇಕಿದ್ದ ಆ ಆಸ್ಪತ್ರೆ ಇನ್ನೂ ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ.
ಹೌದು.. ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಗರ್ಭಿಣಿಯರ ಕನಸಿನ ಕೂಸಾಗಿರುವ ಹೆರಿಗೆ ಮತ್ತು ನವಜಾತ ಶಿಶುಗಳ ಆಸ್ಪತ್ರೆ ಉದ್ಗಾಟನೆಗೊಳ್ಳದೇ ವಿಳಂಬವಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬರೋಬ್ಬರಿ 27 ಕೋಟಿ ರೂಪಾಯಿ ವೆಚ್ಚದಲ್ಲಿ 400 ಬೆಡ್ ಗಳ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ ಕಳೆದ ವರ್ಷದಿಂದಲೇ ಆರಂಭವಾಗಿದೆ. ಹೆರಿಗೆ ಹಾಗೂ ನವಜಾತ ಶಿಶುಗಳ ಆರೈಕೆ ಉದ್ದೇಶದಿಂದ ಕಳೆದ ಆಗಷ್ಟ್ ತಿಂಗಳಲ್ಲೇ ಉದ್ಘಾಟನೆಯಾಗಬೇಕಿದ್ದ ಈ ಪ್ರತ್ಯೇಕ ಆಸ್ಪತ್ರೆ ನವೆಂಬರ್ ತಿಂಗಳು ಬಂದರೂ ಇದುವರೆಗೂ ಸಾರ್ವಜನಿಕರಿಗೆ ಮಕ್ತವಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಬಡಜನರ ಚಿಕಿತ್ಸೆಗಾಗಿ ಈಗಾಗಲೇ ಆರಂಭವಾಗಬೇಕಿದ್ದ ಈ ಬಹುಕೋಟಿ ಆಸ್ಪತ್ರೆ ಈವರೆಗೂ ಉದ್ಘಾಟನೆಗೊಳ್ಳದೇ ವಿಳಂಬವಾಗಿದೆ.
ಅಲ್ಲದೆ ಹಳೆಯ ಕಟ್ಟಡದಲ್ಲಿರುವ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಗುತ್ತಿಗೆದಾರರ ಹಾಗೂ ಸರ್ಕಾರದ ನಡುವೆ ನಡೆಯುತ್ತಿರುವ ಅನುದಾನ ತಿಕ್ಕಾಟದ ಹಿನ್ನೆಲೆ ಇದುವರೆಗೂ ಈ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗದೇ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನು ಈ ಕುರಿತಂತೆ ಕಿಮ್ಸ್ ನ ನಿರ್ದೇಶಕರನ್ನ ಕೇಳಿದರೆ ಅವರು ಹೇಳೋದು ಹೀಗೆ..
ಬಹು ವರ್ಷಗಳಿಂದಲೂ ಈ ಭಾಗದ ಮಹಿಳೆಯರ ಹಾಗೂ ನವಜಾತ ಶಿಶುಗಳ ಚಿಕಿತ್ಸೆಯ ಉದ್ದೇಶದಿಂದ ನಿರ್ಮಾಣವಾಗಬೇಕಿದ್ದ ಈ ಪ್ರತ್ಯೇಕ ಆಸ್ಪತ್ರೆಯ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದ್ದು, ಅತೀ ಶೀಘ್ರವೇ ಈ ಆಸ್ಪತ್ರೆ ಪೂರ್ಣ ಪ್ರಮಾಣದ ನಿರ್ಮಾಣ ಹಂತ ಮುಗಿದು ಯಾವುದೇ ಸಮಸ್ಯೆ ಇಲ್ಲದೇ ಈ ಭಾಗದ ಜನರ ಚಿಕಿತ್ಸೆಗೆ ಮುಕ್ತವಾಗಬೇಕು ಅನ್ನೋದೇ ನಮ್ಮಆಶಯ.
Kshetra Samachara
14/11/2021 01:10 pm