ಧಾರವಾಡ: ಪುರಸಭೆಗೆ ಪಾವತಿಸಲ್ಪಡುವ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ಕರ, ಮಳಿಗೆ ಬಾಡಿಗೆ, ಜಾಹಿರಾತು ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಇನ್ನಿತರೆ ಪುರಸಭೆಗೆ ಭರಣಾ ಮಾಡುವಂತಹ ಯಾವುದೇ ತರಹದ ತೆರಿಗೆಗಳನ್ನು ಪಾವತಿಸಲು ಸಾರ್ವಜನಿಕರಿಗೆ ಭಾರತ ಬಿಲ್ ಪಾವತಿ ವ್ಯವಸ್ಥೆಯನ್ನು ಈಗಾಗಲೇ ಇರುವ ಸ್ವೀಕೃತಿ ತಂತ್ರಾಂಶದಲ್ಲಿ ಸೆಪ್ಟೆಂಬರ್ 13 ರಿಂದ ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ಫೋನ್ ಪೇ, ಪೇಟಿಎಂ, ಗೂಗಲ್ ಪೇ, ಬ್ಯಾಂಕ್ ಪಾವತಿಗಳು ಮತ್ತು ಇನ್ನಿತರ ನೆಟ್ ಬ್ಯಾಂಕಿಂಗ್ ಅಪ್ಲಿಕೇಶಗಳನ್ನು ಉಪಯೋಗಿಸಿ ತೆರಿಗೆಗಳನ್ನು ಪಾವತಿಸಿ ತಮ್ಮ ಸೇವೆಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08380-229247 ಸಂಪರ್ಕಿಸಬಹುದು ಎಂದು ನವಲಗುಂದ ಪುರಸಭೆಯ ಪ್ರಕಟಣೆ ತಿಳಿಸಿದೆ.
Kshetra Samachara
20/09/2022 08:34 pm