ಅಳ್ನಾವರ: ಕಳೆದೆ ಮೂರು ವರ್ಷಗಳಿಂದ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ಅಳ್ನಾವರದ ಹುಲಿಕೇರಿ, ಗ್ರಾಮದ ಇಂದಿರಮ್ಮನ ಕೆರೆಯ ತಡೆಗೋಡೆ ಒಡೆದು ಸಾಕಷ್ಟು ಪ್ರಮಾಣದಲ್ಲಿ ನಷ್ಟವುಂಟಾಗಿತ್ತು. ಈ ಸಂಬಂಧ ಶಾಸಕ ಸಿ.ಸಿಎಂ. ನಿಂಬಣ್ಣವರ ವಿಶೇಷ ಕಾಳಜಿಯಿಂದ ಸುಮಾರು ಹದಿನೇಳು ಕೋಟಿ.ರೂ ಹಣವನ್ನು ಮಂಜೂರು ಮಾಡುವ ಮೂಲಕ ಇಂದಿರಮ್ಮನ ಕೆರೆ ತಡೆಗೋಡೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಇದಕ್ಕೆ ಸಂಬಂಧ ಪಟ್ಟಂತೆ ಇಂದು ಹುಲಿಕೇರಿ ಗ್ರಾಮಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಬಹುಪಾಲು ಕಾಮಗಾರಿ ಅಂದರೆ ಶೇ.80 ರಷ್ಟು ಕೆಲಸ ಅತ್ಯಂತ ಗುಣಮಟ್ಟದಿಂದ ನಡೆದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯ ಪ್ರಾರಂಭವಾದಾಗಿನಿಂದಲೂ ಆರೋಪಗಳು ಕೇಳಿ ಬರುತ್ತಿದ್ದವು. ಕಳಪೆ ಕಾಮಗಾರಿ, ಕಾರ್ಯದಲ್ಲಿ ವಿಳಂಬ, ಈ ಎಲ್ಲ ಆರೋಪಗಳಗೆ ಶಾಸಕರ ಭೇಟಿ, ಸ್ಥಳ ಪರಿಶೀಲನೆಯಿಂದ ತೆರೆ ಎಳೆದಂತಾಗಿದೆ. ಇನ್ನುಳಿದ ಶೇ.20 ರಷ್ಟು ಕಾರ್ಯವು ಆದಷ್ಟು ಬೇಗನೆ ಮುಗಿಯುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಮಹಾಂತೇಶ ಪಠಾನಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
02/08/2022 02:06 pm