ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: BMTC ಬಸ್‌ ಖರೀದಿಗೆ ಮುಂದಾದ KSRTC; 1 ತಿಂಗಳಲ್ಲಿ ಗ್ರಾಮೀಣ ಬಸ್ ಕೊರತೆ ನೀಗಿಸೋ ಪ್ಲಾನ್ !

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿ ಸರಿಯಾದ ರೀತಿಯ ಬಸ್ಸುಗಳ ಸೌಲಭ್ಯವಿಲ್ಲ. ಇದರಿಂದ ಪ್ರಯಾಣಿಕರು ದಿನನಿತ್ಯ ಗ್ರಾಮೀಣ ಭಾಗದಿಂದ ನಗರಕ್ಕೆ ಬರಲು ಪರದಾಟ ಪಡುತ್ತಿದ್ದಾರೆ. ಅದಕ್ಕಾಗಿ ಕೆಎಸ್ಆರ್‌ಟಿಸಿ ಸಂಸ್ಥೆ ಬಿಎಂಟಿಸಿ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ.

ಗ್ರಾಮೀಣ ಭಾಗಗಳಿಗೆ ಬಸ್‌ಗಳ ಕೊರತೆ ಇರುವುದರಿಂದ ಜನರು ಖಾಸಗಿ ವಾಹನಗಳಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಬಸ್ ಗಳ ಕೊರತೆಯಿಂದ ಜನರು ಅನುಭವಿಸುವಂತಹ ಪರದಾಟವನ್ನು ತಪ್ಪಿಸಲು ಕೆಎಸ್ಆರ್‌ಟಿಸಿ ಸಂಸ್ಥೆ ಬಿಎಂಟಿಸಿ ಯಿಂದ ಸುಮಾರು 100 ಬಸ್‌ಗಳನ್ನು ಖರೀಗೆ ಮುಂದಾಗಿದ್ದು ,ಸದ್ಯ ಕೆಎಸ್‌ಆರ್‌ಟಿಸಿ ಸಂಸ್ಥೆ ಇನ್ನೂ ಒಂದೇ ತಿಂಗಳಲ್ಲಿ ಬಸ್ ಖರೀದಿ ಮಾಡಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್‌ಗಳನ್ನು ನಿರ್ವಹಣೆ ಮಾಡಲು ಮುಂದಾಗಿದ್ದಾರೆ.

ಒಟ್ನಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ ಜನರು, ಸಂಚಾರಿ ವಾಹನಗಳಿಲ್ಲದೇ ಖಾಸಗಿ ವಾಹನಗಳಲ್ಲಿನ ಸಂಚಾರ ತಪ್ಪಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು ಒಳ್ಳೆಯ ಸಂಗತಿ. ಆದಷ್ಟು ಬೇಗ ಬಸ್ ಸಂಚಾರ ಆರಂಭಿಸಿ ಜನರಿಗೆ ಅನುಕೂಲ ಮಾಡಿ ಕೊಡಬೇಕಿದೆ

Edited By : Manjunath H D
Kshetra Samachara

Kshetra Samachara

29/07/2022 11:53 am

Cinque Terre

24.61 K

Cinque Terre

0

ಸಂಬಂಧಿತ ಸುದ್ದಿ