ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಾರಿತಪ್ಪಿದ ಸ್ಮಾರ್ಟ್ ಸಿಟಿಯ ಮತ್ತೊಂದು ಮಹತ್ವದ ಯೋಜನೆ: ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಫೋಟಕ ಸತ್ಯ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಒಂದೊಂದಾಗಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು, ಉದ್ಘಾಟನೆಗೊಳ್ಳುತ್ತಿವೆ. ಇನ್ನೊಂದೆಡೆ ವೈಫಲ್ಯಗಳ ಪಟ್ಟಿಯಲ್ಲೂ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಾಗುತ್ತಿವೆ. ಅವಳಿ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ನಿಖರತೆ ತರಲು ರೂಪಿಸಲಾದ ಡಿಜಿಟಲ್ ಸ್ವರೂಪದ ವಿನೂತನ ಯೋಜನೆ ನಿರ್ವಹಣೆ ಆಗದೆ ದಾರಿ ತಪ್ಪಿದೆ..

ನಗರಗಳು ಸ್ಮಾರ್ಟ್ ಕಾಣಲು ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಆದ್ರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೋಟಿ ಕೋಟಿ ಹಣವನ್ನ ನೀರಿನಲ್ಲಿ ಹೋಮ‌‌ ಮಾಡಿದ್ದಾರೆ. ಅವಳಿ ನಗರದಲ್ಲಿ 2.12 ಲಕ್ಷ ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್ ಅಳವಡಿಸಲಾಗಿದೆ. ಅದರಂತೆ ನಿತ್ಯ ಟ್ಯಾಗ್ ರೀಡಿಂಗ್ ಪ್ರಮಾಣ 2.12 ಲಕ್ಷ ಇರಬೇಕಿತ್ತು. ಆದರೆ 40-45 ಸಾವಿರ ಟ್ಯಾಗ್ ರೀಡಿಂಗ್ ದಾಖಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆ, ಉದ್ಘಾಟನೆ, ವಿಸ್ತರಣೆ ಎಲ್ಲವೂ ನಡೆಯುತ್ತದೆ. ಆದರೆ, ಜಾರಿಯಾದ ಬಳಿಕ ಮೇಲ್ವಿಚಾರಣೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಗಿ 43.50 ಕೋಟಿ ರೂಪಾಯಿ ಯೋಜನೆ ಹಳ್ಳ ಹಿಡಿದಿದೆ..

ಇನ್ನೂ ಪ್ರತಿ ಆ‌್ಧ ಎಫ್‌ಐಡಿ ಟ್ಯಾಗ್ 54 ರೂಪಾಯಿ, ರೀಡರ್ ವೆಚ್ಚ 61 ಸಾವಿರ ರೂಪಾಯಿ. ಅವಳಿ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ನ್ಯೂ ಕಾಟನ್ ಮಾರ್ಕೆಟ್‌ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಐಸಿಸಿ). ಆರ್‌ಎಫ್‌ಐಡಿ ಟ್ಯಾಗ್, ರೀಡರ್, ಟಿಪಿಎ‌ ಹಾಗೂ 5 ವರ್ಷಗಳ ನಿರ್ವಹಣೆ ವೆಚ್ಚ ಎಲ್ಲ ಸೇರಿ 43.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮುಂಬೈ ಮೂಲದ ಎನ್‌ಇಸಿ ಲಿಮಿಟೆಡ್ ಈ ಯೋಜನೆಯ ಗುತ್ತಿಗೆ ಪಡೆದಿದೆ. ಮುಂದಿನ 5 ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುತ್ತಿಗೆದಾರರದ್ದೇ ಆಗಿರುವುದರಿಂದ ಪಾಲಿಕೆ ಹಾಗು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ವೈಫಲ್ಯಕ್ಕೆ ಉತ್ತರದಾಯಿತ್ವವನ್ನು ಯಾರು ವಹಿಸಿಕೊಳ್ಳುತ್ತಿಲ್ಲ.

ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಯಾವುದೇ ಒಂದು ಕಾಮಗಾರಿಗಳು ಸಹ ‌ಪೂರ್ಣಗೊಂಡಿಲ್ಲ.‌ ಒಂದೊಂದು ಕಾಮಗಾರಿ ಅಂತ್ಯವಾದ್ರೂ ಇದರಿಂದ ಜನರಿಗೆ ‌ಉಪಯೋಗ ಮಾತ್ರ ಆಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ‌ ನೂರಾರು ಕೋಟಿ‌ ರೂಪಾಯಿ ಹಣ ಪೋಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

28/07/2022 05:58 pm

Cinque Terre

26.84 K

Cinque Terre

5

ಸಂಬಂಧಿತ ಸುದ್ದಿ