ಕುಂದಗೋಳ : ಕಳೆದ ಎರೆಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಹಾನಿಯಾದ ರಸ್ತೆ, ಸೇತುವೆಗಳಿಗೆ ಇಂದಿಗೂ ದುರಸ್ತಿ ಭಾಗ್ಯ ಸಿಕ್ಕಿಲ್ಲಾ ಎಂದ್ರೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೂ ಇದನ್ನು ಕಣ್ತೆರೆದು ನೋಡಲೇಬೇಕು.
ಹೌದು ! ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಿಂದ ಮುಳ್ಳಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳಕ್ಕೆ ಕಟ್ಟಿದ ತಡೆಗೋಡೆ ನೆಲಕ್ಕೆ ಬಿದ್ದು ಡಾಂಬರ್ ರಸ್ತೆ ಕೊಚ್ಚಿಹೋದ್ರು ಈ ರಸ್ತೆ ಅಭಿವೃದ್ಧಿಯನ್ನು ಜನಪ್ರತಿನಿಧಿಗಳು ಮರೆತರಾ ? ಎಂಬ ಪ್ರಶ್ನೆ ಜನರದ್ದಾಗಿದೆ.
ನಿತ್ಯ ಹಲವಾರು ವಾಹನ ಓಡಾಟ ನಡೆಸುವ ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿದ್ರೇ, ಒಂದೇಡೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗುವ ಮುನ್ಸೂಚನೆ ಇದೆ.
ಪರಿಸ್ಥಿತಿ ಹೀಗಿದ್ದರೂ ಸಹ ಕೊಚ್ಚಿ ಹೋದ ರಸ್ತೆಯ ಕುರಿತು ಜಾಗೃತಿ ನೀಡಲು ಒಂದು ನಾಮಫಲಕ ಇಲ್ಲ, ಇನ್ನೂ ರಾತ್ರಿ ವೇಳೆ ಓಡಾಡುವ ವಾಹನ ಸವಾರರು ಯಾವಾಗ ಅಪಾಯಕ್ಕೆ ತುತ್ತಾಗುತ್ತಾರೋ ? ಗೊತ್ತಿಲ್ಲಾ.
ಒಟ್ಟಾರೆ ಜನರ ಸುರಕ್ಷಿತ ಓಡಾಟಕ್ಕೆ ನಿರ್ಮಿಸಿದ ನೂತನ ರಸ್ತೆ ಅವ್ಯವಸ್ಥೆ ಜನರ ಜೀವಕ್ಕೆ ಕುತ್ತು ತರುವ ಹಂತದಲ್ಲಿದೆ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಬೇಕಾಗಿದೆ.
Kshetra Samachara
03/07/2022 12:36 pm