ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಸರತಿ ಸಾಲಿನಲ್ಲಿ ನಿಂತಿರುವ ಜನ, ಇನ್ನೊಂದೆಡೆ ಚಿಲ್ಲರಿಗಾಗಿ ಅಂಗಡಿ, ಅಂಗಡಿ ತಿರುಗಾಡುತ್ತಿರುವ ವ್ಯಕ್ತಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಬಸ್ ಪಾಸ್ ಕೌಂಟರ್ ಗಳಲ್ಲಿ.
ಸದ್ಯ ಈ ಎಲ್ಲ ಸಮಸ್ಯೆಗೆ ನಗರ ಸಂಚಾರಿ ಘಟಕ ಫುಲ್ ಸ್ಟಾಪ್ ಹಾಕಲು ಮುಂದಾಗುತ್ತಿದೆ.
ದೇಶ ಡಿಜಿಟಲೀಕರಣದ ಜಪ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಕ್ಯಾಶ್ ಲೇಸ್ ವ್ಯವಹಾರಕ್ಕೆ ಉತ್ತೇಜನ ನೀಡುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ನಗದು ರಹಿತ ವ್ಯವಹಾರ ಮಾತ್ರ ಸರ್ಕಾರಿ ಸಾರಿಗೆ ಇಲಾಖೆಯಲ್ಲಿ ಕಂಡುಬರುತ್ತಿಲ್ಲ.
ಪರಿಣಾಮವಾಗಿ ಚಿಲ್ಲರೇ ಸಮಸ್ಯೆ ತಲೆದೋರಿದೆ. ಇದನ್ನು ಮನಗಂಡಿರುವ ಹುಬ್ಬಳ್ಳಿ ನಗರ ಸಂಚಾರಿ ಘಟಕ ಬಸ್ ಪಾಸ್ಸಿನ ಕೌಂಟರ್ ಗಳಲ್ಲಿ ಬಾರ್ ಕೋಡ್ ಹಚ್ಚಲು ಮುಂದಾಗುತ್ತಿದೆ.
ಸಾರಿಗೆ ಅಧಿಕಾರಿಗಳೇ ಹೇಳುವಂತೆ ನಿತ್ಯ ಸಾವಿರಾರು ಜನ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೆ. ಅದರಲ್ಲಿ ನೂರಾರು ಪ್ರಯಾಣಿಕರು ಪಾಸ್ ತೆಗೆದುಕೊಂಡು ಪ್ರಯಾಣ ಮಾಡತ್ತಾರೆ. ಇನ್ನು ಕೆಲವರು ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡುತ್ತಾರೆ. ಕೆಲವೊಮ್ಮೆ ಚಿಲ್ಲರೇ ಇಲ್ಲದೇ ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗಳ ನಡುವೆ ಜಟಾಪಟಿ ನಡೆಯುತ್ತವೆ.
ಹೆಚ್ಚಾಗಿ ಉದ್ಯೋಗಸ್ಥ ಯುವಕರು, ಯುವತಿಯರು ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಾರೆ.
ಹೀಗಾಗಿಯೇ ಹುಬ್ಬಳ್ಳಿಯ ನಗರ ಸಂಚಾರಿ ವಿಭಾಗ ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಮೊದಲ ಹಂತವಾಗಿ ಬಸ್ ಪಾಸ್ ಕೌಂಟರ್ ಗಳಲ್ಲಿ ಬಾರ್ ಕೋಡ್ ನ್ನು ಅನುಷ್ಠಾನ ಮಾಡುತ್ತಿದ್ದು, ಇದರಲ್ಲಿ ಎದುರಾಗುವ ಸಮಸ್ಯೆಗಳನ್ನು ಅರಿತು ಮುಂದಿನ ದಿನಗಳಲ್ಲಿ ಎಲ್ಲಡೆ ಬಾರ್ ಕೋಡ್ ಅಳವಡಿಕೆ ಯೋಚನೆಯನ್ನು ಹೊಂದಿದೆ.
Kshetra Samachara
22/06/2022 02:04 pm