ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊಳಚೆ ನೀರಿನಿಂದ ಮುಕ್ತವಾಗಲಿ ಕಟ್ಟಡ ನೆಲಮಹಡಿ; "ಭರವಸೆ ಗಾಳಿಗೋಪುರವಾಗದಿರಲಿ"

ಕುಂದಗೋಳ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ 2017ರಲ್ಲಿ ನಿರ್ಮಾಣವಾಗಿ ಇಂದಿನವರೆಗೂ ನೀರಲ್ಲೇ ನಿಂತಿರುವ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದ ನೀರು ಹೊರಹಾಕಲು ಯೋಜನೆ ಸಿದ್ಧವಾಗಿದೆ.

ತಾಲೂಕು ಪಂಚಾಯಿತಿ ಆಡಳಿತಕ್ಕೆ ಒಳಪಟ್ಟ ನಾನಾ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ4 ಇಲಾಖೆ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆ ಕೆಳ ಮಹಡಿಯಲ್ಲಿ ನೀರು ಸಂಗ್ರಹವಾಗಿ ಅವ್ಯವಸ್ಥೆ ತಲೆದೋರಿದೆ. ಇಲ್ಲಿ ಹಾವು ಇತ್ಯಾದಿ ಸೇರಿಕೊಂಡಿರುವುದರ ಜತೆಗೆ ಈಜುಕೊಳವಾದ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಸರಣಿ ವರದಿ ಪ್ರಸಾರ ಮಾಡಿತ್ತು.

ಆ ವರದಿ ಜನಪ್ರತಿನಿಧಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಲೊಕೋಪಯೊಗಿ ಅಧಿಕಾರಿಗಳ ಗಮನ ಸೆಳೆದಿದ್ದು, ಇದೀಗ ಇಲಾಖೆ ಕೆಳ ಮಹಡಿಯಲ್ಲಿನ ನೀರನ್ನು ಹೊರ ಹಾಕುವುದಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ರಾಜ್ಯ ಹೆದ್ದಾರಿಯ ಚರಂಡಿ ಕಾಮಗಾರಿ ನಡೆಯಲಿದೆ. ಈ ವೇಳೆ ಕಟ್ಟಡದ ನೀರನ್ನು ಹೊರಹಾಕಲು ಚರಂಡಿಗೆ ಸಂಪರ್ಕ ಕಲ್ಪಿಸುತ್ತೇವೆ. ಆದರೆ, ಸ್ಪೆಶಲ್ ಪ್ರಾಜೆಕ್ಟ್ ಇಲ್ಲ ಎಂದಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

16/06/2022 04:47 pm

Cinque Terre

34.69 K

Cinque Terre

1

ಸಂಬಂಧಿತ ಸುದ್ದಿ