ನವಲಗುಂದ : ನವಲಗುಂದ ಪಟ್ಟಣದಿಂದ ಅಣ್ಣಿಗೇರಿಗೆ ತೆರಳುವ ಪ್ರಮುಖ ರಸ್ತೆಯ ಪ್ಯಾಚ್ ವರ್ಕ್ ಕಾರ್ಯ ಆರಂಭವಾಗಿದೆ. ಕಳೆದ ಬಾರಿ ಹಾಕಲಾಗಿದ್ದ ಪ್ಯಾಚ್ ವರ್ಕ್ ಈಗಾಗಲೇ ಹಲವೆಡೆ ಕಿತ್ತು ಹೋಗಿದ್ದವು. ಈಗ ಮತ್ತೆ ಪ್ಯಾಚ್ ವರ್ಕ್ ಕಾರ್ಯ ಆರಂಭ ಮಾಡಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಹದಗೆಟ್ಟ ರಸ್ತೆಯಿಂದ ಸವಾರರು ಪರದಾಟ ನಡೆಸುವಂತಾಗಿತ್ತು. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈ ವೇಳೆ ರಸ್ತೆ ಹದಗೆಟ್ಟಿದ್ದರೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಆಗುತ್ತಿತ್ತು. ಈಗ ರಸ್ತೆ ದುರಸ್ಥಿ ಮಾಡಲಾಗುತ್ತಿದ್ದು, ವಾಹನ ಸಂಚಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
04/06/2022 01:20 pm