ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಅಕಾಲಿಕ ಮಳೆಗೆ 20 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಅಳ್ನಾವರ: ರಾಜ್ಯದ ಅನೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.ಕಳೆದ ಹಲವು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿರುವ ಪರಿಣಾಮ ಜನರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ.ಅದರ ಪರಿಣಾಮ ಎಷ್ಟಿದೆ ಎಂಬುದು ಅಲ್ಲಿನ ಈ ದೃಶ್ಯಗಳು ಹೇಳುತ್ತಿವೆ.

ಬುಧವಾರ ಸಂಜೆ ಸುರಿದ ರಣ ಭೀಕರ ಮಳೆಗೆ ಮರಗಳೆಲ್ಲವು ನೆಲಕ್ಕುರುಳಿವೆ.20ಕ್ಕೂ ಹೆಚ್ಚು ಮನೆಗಳು ಜಖಂ ಆಗಿವೆ.

ಓಡಾಡಲು ರಸ್ತೆ ಇಲ್ಲದಂತಾಗಿದೆ. ವಿದ್ಯುತ್ ಕಂಬಗಳು ನೆಲ ಕಚ್ಚಿವೆ.ದೇವಸ್ಥಾನದ ಮೇಲೆ ಮರ ಉರುಳಿದ ಪರಿಣಾಮ ದೇವಸ್ಥಾನ ಹಾನಿಗೀಡಾಗಿದೆ.

ಬುಡಕಟ್ಟು ಜನಾಂಗ ವಾಸಿಸುವ ಚಿಕ್ಕ ಗ್ರಾಮ ಶಿವನಗರ.ಹೈನುಗಾರಿಕೆಯೇ ಇವರ ಮುಖ್ಯ ಕಸಬು.ಕಷ್ಟ ಪಟ್ಟು ವಾಸಿಸಲು ಕಟ್ಟಿದ ಮನೆಗಳು ಹಾಳಾಗಿದ್ದನ್ನು ನೋಡಿ ಅಲ್ಲಿನ ಜನ ಕಣ್ಣೀರು ಇಡುವ ಸ್ಥಿತಿ ಬಂದಿದೆ.ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸ ಬೇಕು.ಶಾಸಕರು ಬಂದು ನೈಜ ಸ್ಥಿತಿಯನ್ನು ಕಣ್ಣಾರೆ ಕಾಣಬೇಕು.ಆದಷ್ಟು ಬೇಗ ಇಲ್ಲಿನ ಜನರಿಗೆ ಪರಿಹಾರ ಕಲ್ಪಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಮಹಾಂತೇಶ ಪಠಾಣಿ

ಪಬ್ಲಿಕ್ ನೆಕ್ಸ್ಟ್

ಅಳ್ನಾವರ

Edited By :
Kshetra Samachara

Kshetra Samachara

28/04/2022 10:44 am

Cinque Terre

31.91 K

Cinque Terre

0

ಸಂಬಂಧಿತ ಸುದ್ದಿ