ಕುಂದಗೋಳ : ಜಾನುವಾರುಗಳ ಆರೋಗ್ಯ ರಕ್ಷಣೆ ಜೊತೆ ಅಗತ್ಯ ಸಮಯಕ್ಕೆ ಚಿಕಿತ್ಸೆ ನೀಡಬೇಕಾದ ಪಶು ಆಸ್ಪತ್ರೆಯ ಕಟ್ಟಡದ ಭಾಗ್ಯ ಮಾತ್ರ ಯರಗುಪ್ಪಿಗೆ ದೊರೆತಿದೆ.
ಆ ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಇಲ್ಲಾ, ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯವೂ ಇಲ್ಲಾ.
ಹೌದು ! ಜಿಲ್ಲಾ ಪಂಚಾಯತ್ ಪಶುಪಾಲನಾ ಪಶು ವೈದ್ಯ ಸೇವಾ ಇಲಾಖೆಯ 2018-19 ನೇ ಸಾಲಿನಲ್ಲಿ ಆರ್.ಐ.ಡಿ.ಎಫ್ ಯೋಜನೆ ಅಡಿಯಲ್ಲಿ ಯರಗುಪ್ಪಿಯಲ್ಲಿ ನಿರ್ಮಿಸಿದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ನಿರ್ಮಾಣವಾಗಿ ಮೂರು ವರ್ಷ ಕಳೆಯುತ್ತಾ ಬಂದರೂ ಇಂದಿಗೂ ಉದ್ಘಾಟನೆಗೊಂಡಿಲ್ಲ, ಉಪಯೋಗಕ್ಕೂ ದೊರೆತಿಲ್ಲ.
ಈ ಕಾರಣ ಯರಗುಪ್ಟಿ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ರೈತಾಪಿ ಜನ ಜಾನುವಾರುಗಳ ಆರೋಗ್ಯದಲ್ಲಿ ತೀವ್ರ ಏರುಪೇರು, ರೋಗ ರುಜಿನಕ್ಕೆ ತುತ್ತಾದ್ರೇ ಕುಂದಗೋಳ ಪಟ್ಟಣಕ್ಕೆ ಬರುವ ಪ್ರಸಂಗ ಏರ್ಪಟ್ಟಿದೆ.
ಸದ್ಯ ಯರಗುಪ್ಪಿಯಲ್ಲಿ ಹಳೇಯ ಕಟ್ಟಡದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಲಭ್ಯವಿದ್ದರೂ ಸಹ ವಾತಾವರಣ ಸರಿಯಿಲ್ಲಾ, ಇದಲ್ಲದೆ ನೂತನ ಪ್ರಾಥಮಿಕ ಪಶು ಆಸ್ಪತ್ರೆ ಸುಸಜ್ಜಿತವಾಗಿ ತಯಾರಾದ್ರೂ ಬಳಕೆಗೆ ಲಭ್ಯ ಇಲ್ಲಾ ಎಂಬುದು ರೈತಾಪಿ ಜನರ ಪ್ರಶ್ನೇ ? ಈ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕಿದೆ.
Kshetra Samachara
24/03/2022 07:33 am