ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲಾ ಎಂದು ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಸ್ಥರ ಮನೆ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಅಧಿಕಾರಿಗಳು ಕಡಿತ ಮಾಡಿದ್ದನ್ನು ವಿರೋಧಿಸಿ ಹಂಚಿನಾಳ ಅಂಬೇಡ್ಕರ್ ನಗರದ ನಿವಾಸಿಗಳು ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ಹೆಸ್ಕಾಂ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಹೌದು ! ನಮಗೆ ವಿದ್ಯುತ್ ಬಿಲ್ ತುಂಬಲು ಅವಕಾಶ ಕೊಡಿ ಹಂತ ಹಂತವಾಗಿ ಹಣ ಕಟ್ಟುತ್ತೇವೆ, ಹೀಗೆ ಏಕಾಏಕಿ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡಿದ್ರೇ, ಹೇಗೆ ? ಎಂದು ಹೆಸ್ಕಾಂ ಇಲಾಖೆಗೆ ಬೀಗ ಜಡಿದ ಹಂಚಿನಾಳ ಗ್ರಾಮಸ್ಥರ ಇಲಾಖೆ ವಿರುದ್ಧ ಅಧಿಕಾರಿಗಳ ಘೋಷಣೆ ಕೂಗಿದರು.
ಈ ಬಗ್ಗೆ ಹೆಸ್ಕಾಂ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವಿರೇಶ್ ಮಠದ ಅವರನ್ನು ಕೇಳಿದ್ರೇ, ಮೇಲಾಧಿಕಾರಿಗಳ ಆದೇಶ ಸರ್ಕಾರದ ನಿಯಮ ನಾವು ಪಾಲಿಸಬೇಕು, ಆದ್ರೇ ನಾವು ಯಾರಿಗೂ ದಬ್ಬಾಳಿಕೆ ಮಾಡಿಲ್ಲ ಎಂದರು.
ಬಳಿಕ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಎನ್.ಎಮ್.ದೇಶನೂರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಮನವೂಲಿಸಿ ಅಧಿಕಾರಿಗಳಿಂದ ಅವಧಿ ನೀಡಿ ಪ್ರತಿಭಟನೆ ಶಾಂತ ಗೊಳಿಸಿದರು
Kshetra Samachara
15/02/2022 11:06 am