ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿ ಕರೆಂಟ್ ಬಿಲ್ ತುಂಬಿಲ್ಲಾ ಅಂತ್ ಅವ್ರು ಮನಿ ವಿದ್ಯುತ್ ಕಟ್ ಮಾಡಿದ್ರೂ, ಇವ್ರು ಮನಿ ವಿದ್ಯುತ್ ಕಟ್ ಮಾಡಿದ್ರೂ ಅನ್ನೂದ್ರಾಗ ಇಲ್ಲೇ ಇಡೀ ಕುಂದಗೋಳ ತಾಲೂಕಿಗೆ ಬೇಕಾದ ನಾಲ್ಕು ಮುಖ್ಯ ಇಲಾಖೆ ಕತ್ತಲದಾಗ ಕುಂತಾವ್ ನೋಡ್ರಿ.
ಹೌದ ರೀ,! ಈ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಾಗ ಕರ್ತವ್ಯ ನಿರ್ವಹಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳ ಕಚೇರಿ, ವಲಯ ಅರಣ್ಯಾಧಿಕಾರಿಗಳ ಕಚೇರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಳೆದ ಶನಿವಾರದಿಂದ ಇಂದಿನವರೆಗೆ ಅಂದ್ರೇ ಬರೋಬ್ಬರಿ ಐದು ದಿನ ಕತ್ತಲಲ್ಲಿವೆ.
ಕಚೇರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಕೆಲವರು ಕೈಯಿಂದಲೇ ಮಾಹಿತಿ ಬರೆದ್ರೇ. ಕೆಲವರು ಸ್ರ್ತೀ ಶಕ್ತಿ ಭವನಕ್ಕೆ ತೆರಳಿ ಕಂಪ್ಯೂಟರ್ ಕೆಲಸ ನಡೆಸಿದ್ದಾರೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಲ್ಯಾಪ್ ಟಾಪ್ ಹೊಂದಿದ್ರೇ, ವಲಯ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬ್ಯಾಟರಿ ಮೇಲೆ ಕರ್ತವ್ಯ ನಡೆಸಿ ಅದು ಖಾಲಿಯಾಗಿ ಕತ್ತಲಲ್ಲೇ ಕಾಲ ಕಳೆದಿವೆ.
ಈ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದು, ಈ ನಾಲ್ಕು ಇಲಾಖೆಗಳು ತಾಪಂ ಕಚೇರಿಗೆ ಬಾಡಿಗೆ ಹಾಗೂ ನಿರ್ವಹಣೆ ಶುಲ್ಕ ಕಟ್ಟುತ್ತೇವೆ. ಆದ್ರೇ ಈದೀಗ ವಿದ್ಯುತ್ ಸಂಪರ್ಕ ಇಲ್ಲದೆ ಈ ಪಾಟಿ ಪರದಾಟ ನಡೆಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ.
ಒಟ್ಟಾರೆ ತಾಪಂ ಅಧಿಕಾರಿಗಳು ಈ ಕಟ್ಟಡಕ್ಕೆ 86000 ವಿದ್ಯುತ್ ಬಿಲ್ ತುಂಬಿ ಬೆಳಕಿನ ಭಾಗ್ಯ ನೀಡ್ತಾರಾ ಕಾದು ನೋಡಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
03/12/2021 09:31 am