ಕುಂದಗೋಳ : ಹೊಸದಾಗಿ ಹೊಲ ಖರೀದಿ ಮಾಡಿದ್ವಿ ಖರೀದಿ ಮಾಡಿಸ್ಬೇಕು, ಬ್ಯಾಂಕಲ್ಲಿ ಸಾಲ ಬೇಕು ಕಾಗದ ಪತ್ರದ ವ್ಯವಹಾರ ಸರಿ ಮಾಡ್ಬೇಕು, ಪಹಣಿ ಪತ್ರ ತೆಗೆಸಬೇಕು ಎಂದು ನೀವು ತಹಶೀಲ್ದಾರ ಕಚೇರಿಗೆ ಬಂದ್ರೇ ಈ ಎಲ್ಲ ಕೆಲಸ ಆಗೋದಿಲ್ಲ ಬಿಡಿ.
ಯಾಕಪ್ಪಾ ! ಅಂದ್ರಾ, ಈ ತಹಶೀಲ್ದಾರ ಕಚೇರಿಗೆ ಎರೆಡು ಸಮಸ್ಯೆ ಕಾಡ್ತಿವೆ. ಒಂದು ಸರ್ವರ್ ಸಮಸ್ಯೆ ಇನ್ನೋಂದು ವಿದ್ಯುತ್ ಸಮಸ್ಯೆ, ಈ ಕಾರಣದಿಂದ ಜನರಿಗೆ ಕಳೆದ ಮೂರು ದಿನಗಳಿಂದ ಇಲಾಖೆ ಸಮರ್ಪಕ ಸೇವೆ ಒದಗಿಸಲು ಸಾಧ್ಯಾವಾಗ್ತಾ ಇಲ್ಲಾ.
ಹೀಗಾಗಿ ಸುತ್ತ ಹಳ್ಳಿಗಳಿಂದ ಬರೋ ಜನರ ಸಬ್ ರಿಜಿಸ್ಟ್ರಾರ್ ಸರ್ಕಾರಿ ಕೆಲಸಗಳು ದಿನ ಕಳೆಯುತ್ತಿವೆ. ಈ ಬಗ್ಗೆ ವಿವಿಧ ಕೆಲಸ ಹೊತ್ತು ಆಫೀಸ್'ಗೆ ಬಂದ್ ಜನರು ಏನು ಹೇಳ್ತಾರೆ ನೀವೆ ಕೇಳಿ.
ಕೇಳಿದ್ರಲ್ಲಾ, ತಹಶೀಲ್ದಾರ ಕಚೇರಿ ಒಳಗೆ ಭೂಮಿ ಸರ್ವರ್ ಇದ್ರೆ ವಿದ್ಯುತ್ ಇರಲ್ಲಾ, ವಿದ್ಯುತ್ ಇದ್ರೆ ಸರ್ವರ್ ಇರಲ್ಲಾ ಹೀಗಾಗಿ ಜನರು ಕಂಗಾಲಾಗಿದ್ದು ಸಮಸ್ಯೆ ಪರಿಹಾರ ಒದಗಿಸಿ ಎನ್ನುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಸಾರ್ ಸರ್ವರ್ ನಮ್ಮ ಕೈಯಲ್ಲಿ ಇಲ್ಲಾ, ಸರ್ವರ್ ವಿದ್ಯುತ್ ಇದ್ರೆ ನಮ್ಗೂ ಖುಷಿ ಅವತ್ತಿನ ಕೆಲ್ಸಾ ಅವತ್ತೇ ಕ್ಲೋಸ್ ಆಗ್ತವೆ. ಈಗ ಈ ಭೂಮಿ ಎಸ್.ಡಿ.ಸಿ ಸರ್ವರ್ ಬೆಂಗಳೂರಿನಿಂದ ನಮಗೆ ಒದಗುತ್ತೆ ಸದ್ಯ ಆ ಸರ್ವರ್ ಇಲ್ಲಾ ಮೂರು ದಿನಗಳ ಕೆಲಸ ಪೆಂಡಿಂಗ್ ಇದೆ. ಜನರ ಸಮಸ್ಯೆ ಅರ್ಥ ಆಗುತ್ತೆ, ನಾವು ಕೆಲಸ ಮಾಡಲು ರೆಡಿ ಎಂತಾರೇ.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಮೇಲಾಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಿ ಇಲಾಖೆಗೆ ಅಲೆದು ಚಪ್ಪಲಿ ಸವೆಸೋ ಜನರ ಅಳಲಿಗೆ ಸ್ಪಂದಿಸಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
10/02/2021 03:57 pm