ಕುಂದಗೋಳ : ಸಾರ್ವಜನಿಕರ ಸಂಚಾರಕ್ಕೆ ಈ ರಸ್ತೆ ಮತ್ತು ಬ್ರಿಡ್ಜ್ ನಿರ್ಮಿಸಿ ಕೈ ಕಟ್ಟಿ ಕೂರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರಳಿ ಅವುಗಳ ನಿರ್ವಹಣೆ ಕಡೆ ಗಮನ ಹರಿಸೋದು ದೂರದ ಮಾತು ನೋಡಿ.
ಯಾಕಪ್ಪಾ ಈ ಮಾತನ್ನ ಹೇಳತಿದಿವಿ ಅಂದ್ರಾ, ಇಲ್ನೋಡಿ ಸ್ವಾಮಿ ಕುಂದಗೋಳ ತಾಲೂಕಿನ ಯರಗುಪ್ಪಿಯಿಂದ ರೊಟ್ಟಿಗವಾಡಕ್ಕೆ ಸಂಪರ್ಕ ಕಲ್ಪಿಸುವ ಈ ಬೃಹತ್ ಬೆಣ್ಣೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಬ್ರೀಡ್ಜ್ ಯಾವಾಗ ? ಯಾವ ವಾಹನ ಸವಾರರ ಅಪಘಾತಕ್ಕೆ ಕಾರಣವಾಗುತ್ತೋ ಗೊತ್ತಿಲ್ಲ.
ಕಾರಣ. ಈ ಬ್ರೀಡ್ಜ್ ಅಂದ್ರೇ ಸೇತುವೆಗೆ ತಡೆಗೋಡೆ ಇಲ್ಲಾ, ಇನ್ನು ಆರೇಳು ಪೂಟಿಗೊಂದು ಚೋಟುದ್ದ ಕಂಬ ನಿಲ್ಲಿಸಿದ್ದು ಅವು ಸಿಮೆಂಟ್ ಒಡೆದು ಕಬ್ಬಿಣ ಸಳಿ ಹರಡಿವೆ. ಈ ಸೇತುವೆ ಮೇಲೆ ಚಲಿಸೋ ಬೈಕ್ ಸೇರಿದಂತೆ ಇತರೆ ವಾಹನ ಸವಾರರು ತುಸು ಯಾಮಾರಿದ್ರೇ ಈ ಬೃಹದಾದ ಹಳ್ಳಕ್ಕೆ ಬಿಳೋದು ಗ್ಯಾರಂಟಿ.
ಈಗಾಗಲೇ ಕೆಲ ಬೈಕ್ ಹಳ್ಳಕ್ಕೆ ಬಿದ್ದಿದ್ದು ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಗಾಲದಲ್ಲಿ ರೊಟ್ಟಿಗವಾಡ ಸಂಪರ್ಕ ಕಲ್ಪಿಸುವ ಜನರಿಗೆ ಸೇತುವೆ ತಡೆಗೋಡೆ ಇರದ ಕಾರಣ ಎಲ್ಲಿಲ್ಲದ ತೊಂದರೆ ಕಾಡಿದ್ದು ಒಂದ್ಹೋತ್ತಿಗೆ ದಿನಸಿ ಸಿಗದೆ ಪರದಾಡಿದ್ದಾರೆ.
ಈ ಬಗ್ಗೆ ಇನ್ನಾದರೂ ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಎಂದು ಸಾರ್ವಜನಿಕರು ಅಂಗಲಾಚಿದ್ದಾರೆ.
Kshetra Samachara
05/02/2021 01:21 pm