ಅದೊಂದು ತಾಲೂಕಿನ ಕೇಂದ್ರ ಕಚೇರಿ ಅಂದ್ರೆ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ. ಇದೀಗ ಆ ಕಚೇರಿ ಅವ್ಯವಸ್ಥೆ, ಅನೈರ್ಮಲ್ಯ, ಕಟ್ಟಡದ ದುಸ್ಥಿತಿ ಒಂದು ಹೋರಾಟಕ್ಕೆ ಕಾರಣ ಆಗುತ್ತೇ ಎಂದ್ರೇ ನೀವೂ ನಂಬಲೇಬೇಕು.
ಇದು 1990ರಲ್ಲಿ ಅಡಿಗಲ್ಲು ಕಂಡು 1994ರಲ್ಲಿ ಉದ್ಘಾಟನೆಯಾಗಿ ಇಂದಿಗೆ 28 ವರ್ಷ ಗತಿಸಿದ ತಹಶೀಲ್ದಾರ ಕಚೇರಿ ಇಂದಿನ ದಾರುಣ ಸ್ಥಿತಿ. ತಹಶೀಲ್ದಾರ ಕಚೇರಿಗೆ ಬಂದ್ರೇ ಜಾರಿ ಬೀಳುವ ಭಯದ ರಾಡಿ ಕೊಳಚೆ ನೀರು ಅನೈರ್ಮಲ್ಯ, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತುಲಪಿ ಈಗಾಗಲೇ ಸಿಮೆಂಟ್ ಮೇಲ್ಪದರು ಜನರ ಮೇಲೆ ಬೀಳ್ತಾ ಇದೆ. ಇನ್ನೂ ಇಲ್ಲಿನ ಮಹಿಳಾ ಮತ್ತು ಪುರುಷ ಅಧಿಕಾರಿಗಳಿಗೆ ಶೌಚಾಲಯದ ಸಮಸ್ಯೆ ಇದ್ದು, ಜನತೆಗೆ ಬಯಲು ಮೂತ್ರ ವಿಸರ್ಜನೆ ಖಾಯಂ ಆಗಿದೆ.
ತಹಶೀಲ್ದಾರ್ ಕಚೇರಿ ಸುತ್ತ ಹಾಗೂ ಕಟ್ಟಡ ಒಳಾಂಗಣದಲ್ಲಿ ಕೆಸರು ತುಂಬಿ, ಮೊಣಕಾಲುದ್ದ ಕಸ ಬೆಳೀತಾ ಇದ್ದು ಸೊಳ್ಳೆ ಹಾವುಗಳ ಕಾಟ ಅತಿಯಾಗಿದೆ.
ಈಗಾಗಲೇ ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯನ್ನು ಸ್ಥಳೀಯರು ಗಮನಕ್ಕೆ ತಂದರೂ ಇಂದಿಗೂ ಶಿಥಿಲಾವಸ್ಥೆ ತಲುಪಿದ ಕೂರಲು ಆಸನ ಇಲ್ಲದ ಈ ಕಚೇರಿಗೆ ಅಭಿವೃದ್ಧಿ ಭಾಗ್ಯ ಒದಗಿಲ್ಲ. ಈ ಕಾರಣ ಸ್ಥಳೀಯರೇ ಜನತೆಯ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ದುರಸ್ತಿಗಾಗಿ ಶೀಘ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/07/2022 05:17 pm