ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಳಗೆಲ್ಲಾ ಹುಳುಕು ಮೇಲೆ ಮಾತ್ರ ಬೆಳಕು; ಸ್ಮಾರ್ಟ್ ಸಿಟಿ ಕೆಲಸ ನೋಡ್ರಿ ಸಂಪೂರ್ಣ ಕೊಳಕು.!

ಸ್ಮಾರ್ಟ್ ಸಿಟಿ ಅವ್ಯವಸ್ಥೆಯ ಕುರಿತು ಪಬ್ಲಿಕ್ ನೆಕ್ಸ್ಟ್ ಸಾಕಷ್ಟು ಸ್ಫೋಟಕ ವರದಿಯನ್ನು ಭಿತ್ತರಿಸಿದೆ. ಈಗ ಮತ್ತೊಂದು ಕಳಪೆ ಕಾಮಗಾರಿ ವರದಿಯೊಂದನ್ನು ತಮ್ಮ ಮುಂದೆ ಇಡಲು ಮುಂದಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.

ಹೌದು. ಮಹಾತ್ಮ ಗಾಂಧಿ ಉದ್ಯಾನವನದಲ್ಲಿ 26 ಕೋಟಿ 11 ಲಕ್ಷ ರೂ. ವೆಚ್ಚದಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ಪೂರ್ಣಗೊಳಿಸಿದ್ದ ಸ್ಮಾರ್ಟ್ ಸಿಟಿ ಇಲಾಖೆ ಈಗ ಮೂರುಸಾವಿರ ಮಠದ ಆವರಣದಲ್ಲಿರುವ ಹರಪ್ಪನಹಳ್ಳಿ ಓಣಿಯಲ್ಲಿ ಹೈಟೆಕ್ ಚರಂಡಿ ನಿರ್ಮಾಣ ಮಾಡಲು ಮುಂದಾಗಿದೆ. ಆದರೆ ಬೇಕಾಬಿಟ್ಟಿಯಾಗಿ ಚರಂಡಿಯನ್ನು ಮುಚ್ಚಿ ಒಳಗೆ ಹುಳುಕು ಮೇಲೆ ಬೆಳಕು ಎಂಬುವಂತೆ ಮಾಡಿದ್ದಾರೆ. ಈಗಾಗಲೇ ಇದ್ದ ಐದು ಫೂಟ್ ಚರಂಡಿಯನ್ನು ಮೂರು ಫೂಟ್ ಮಾಡಿದ್ದು, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಕಳಪ ಕಾಮಗಾರಿ ಮಾಡಿ ಕಾಂಕ್ರೀಟ್ ಹಾಕಲು ಮುಂದಾಗಿದ್ದಾರೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅವಳಿನಗರದಲ್ಲಿ ಒಂದಿಲ್ಲೊಂದು ರೀತಿಯ ಕಳಪೆ ಕಾಮಗಾರಿಯಿಂದ ಹಾಗೂ ಅವಶ್ಯಕತೆ ಇಲ್ಲದ ರೀತಿಯಲ್ಲಿ ಹಣವನ್ನು ಪೋಲು ಮಾಡುತ್ತಿರುವ ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸ್ಮಾರ್ಟ್ ಸಿಟಿ ಎಂ.ಡಿ. ಶಕೀಲ್ ಅಹ್ಮದ್ ಅವರು ಯಾರ ಒತ್ತಡಕ್ಕೆ ಈ ರೀತಿಯಲ್ಲಿ ಮಾಡುತ್ತಿದ್ದಾರೋ ಅಥವಾ ತಮಗೆ ತಿಳಿಯದಂತೆ ಮಾಡಿ ಮುಗಿಸಲು ಮುಂದಾಗಿದ್ದರೋ ಒಂದು ಕೂಡ ಅರ್ಥವಾಗುತ್ತಿಲ್ಲ.

ಒಟ್ಟಿನಲ್ಲಿ ಇಷ್ಟು ದಿನ ಆಮೆಗತಿಯಲ್ಲಿದ್ದ ಸ್ಮಾರ್ಟ್ ಸಿಟಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವೇಗ ಪಡೆದುಕೊಂಡಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಮಾರ್ಟ್ ಸಿಟಿ ಎಂಡಿ ಅವರೇ ಉತ್ತರ ನೀಡಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/08/2022 05:29 pm

Cinque Terre

136.02 K

Cinque Terre

14

ಸಂಬಂಧಿತ ಸುದ್ದಿ