ಸ್ಮಾರ್ಟ್ ಸಿಟಿಯಲ್ಲಿ ನೆಹರೂ ಮೈದಾನ ಆಯ್ಕೆಯಾಗಿದ್ದರೂ ಕೂಡ ಕಾಮಗಾರಿ ವಿಳಂಬದಿಂದ ಕ್ರೀಡಾಪಟುಗಳಿಗೆ ಇನ್ನೂ ಕೂಡ ಮುಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಕ್ರೀಡೆಗೆ ಮುಕ್ತ ಮಾಡಿ ಆಟಗಾರರಿಗೆ ನೀಡಬೇಕು ಎಂದು ಹುಬ್ಬಳ್ಳಿ ಕ್ರಿಕೆಟ್ ಆಟಗಾರರು ಸಾಮಾನ್ಯ ಸಭೆಯ ವೇಳೆಯಲ್ಲಿ ಪಾಲಿಕೆ ಮೇಯರ್ ಗೆ ಮನವಿ ಸಲ್ಲಿಸಿದರು.
ಈಗಾಗಲೇ ನೆಹರು ಮೈದಾನಕ್ಕೆ ಚರಂಡಿ ನೀರು ಸೇರುತ್ತಿದ್ದು, ಈ ಕೂಡಲೇ ಅವ್ಯವಸ್ಥೆಗೆ ಬ್ರೇಕ್ ಹಾಕಿ ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.
Kshetra Samachara
30/06/2022 01:48 pm