ʼಪಬ್ಲಿಕ್ ನೆಕ್ಸ್ಟ್ʼ ವರದಿ ಫಲಶ್ರುತಿ
ಕಾಡಿನಂತಾಗಿದ್ದ ಗಾರ್ಡನ್ ಈಗ ಸ್ವಚ್ಛತಾ ಭಾಗ್ಯ ಕಂಡಿದೆ. ಹೌದು... ವಾರ್ಡ್ ನಂ. 49ರಲ್ಲಿ ಬರುವ ಲಿಂಗರಾಜನಗರ ರೋಡ್ ಶೆಟ್ಟರ್ ಲೇಔಟ್ ನಲ್ಲಿರುವ ಗಾರ್ಡನ್ ನ ಎಲ್ಲೆಂದರಲ್ಲಿ ಗಿಡಗಂಟಿ-ಪೊದೆ ಬೆಳೆದು ಕಾಡಿನಂತಾಗಿತ್ತು. ಜತೆಗೆ ಕಸಕಡ್ಡಿಗಳಿಂದ ಕೂಡಿ ಪರಿಸರ ಅಸಹನೀಯವಾಗಿತ್ತು.
ಈ ಎಲ್ಲ ನಕರಾತ್ಮಕ ಅಂಶಗಳಿಂದಾಗಿ ಜನರು ವಾಯುವಿಹಾರಕ್ಕೆ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಈ ಗಾರ್ಡನ್ ನ ಅಧೋಗತಿ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಸವಿಸ್ತಾರವಾಗಿ ವರದಿ ಮಾಡಿದ ನಂತರ, ಪಾಲಿಕೆ ಅಧಿಕಾರಿಗಳು ಈಗ ಗಾರ್ಡನ್ ನ ಸ್ವಚ್ಛತೆಯತ್ತ ಚಿತ್ತ ಹರಿಸಿ ಕಾರ್ಯಪ್ರವೃತ್ತರಾಗಿದ್ದಾರೆ.
ಒಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಗಾರ್ಡನ್ ಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಜನರು ದಿನನಿತ್ಯ ಎದುರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳು ಗಮನಿಸಿ, ಹೊಣೆ ಹೊತ್ತು ಬಗೆಹರಿಸಬೇಕಾಗಿದೆ. ಜತೆಗೆ ಯಾವುದೇ ಸೌಲಭ್ಯಗಳ ನಿರ್ವಹಣೆಯನ್ನೂ ಚೆನ್ನಾಗಿ ನೋಡಿಕೊಳ್ಳಬೇಕಾಗಿದೆ. ಸದ್ಯ, ಈಗ ಪಾಲಿಕೆ ಗಾರ್ಡನ್ ಸ್ವಚ್ಛಗೊಳಿಸಿದ್ದರಿಂದ ಸ್ಥಳೀಯರು ʼಪಬ್ಲಿಕ್ ನೆಕ್ಸ್ಟ್ʼ ಗೆ ಅಭಿನಂದನೆ ಸಲ್ಲಿಸಿದ್ದಾರೆ.
- ಈರಣ್ಣ ವಾಲಿಕಾರ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
Kshetra Samachara
14/06/2022 01:21 pm