ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ದಾರಿ ಇಲ್ಲದ ಗ್ರಾಮಸ್ಥರ ಬಾಳು, ಕೇಳುವವರಿಲ್ಲ ಇವರ ಗೋಳು

ಇಲ್ಲೊಂದು ಗ್ರಾಮದ ಜನರಿಗೆ ಸಮರ್ಪಕ ರಸ್ತೆ ಸೌಲಭ್ಯವಿಲ್ಲ. ನಿತ್ಯ ಹಾಳಾದ ರಸ್ತೆಯಲ್ಲೇ ಇವರು ಸಂಚರಿಸುತ್ತಾರೆ. ಆದ್ರೆ ಈ ರಸ್ತೆ ಅಪಘಾತದ ಮುನ್ಸೂಚನೆ ನೀಡುತ್ತಿದೆ. ಕೃಷಿ ಕಾರ್ಯ ಕೈಗೊಳ್ಳಲು ಜಮೀನಿಗೆ ತೆರಳುವುದು ಹಾಗೂ ಪರ ಊರಿಗೆ ಹೋಗುವುದೇ ಈ ಜನರಿಗೆ ಕಷ್ಟವಾಗಿದೆ.

ಇಂತಹ ಪರಿಸ್ಥಿತಿಗೆ ಸಿಲುಕಿದವರೇ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಸ್ಥರು. ಹಂಚಿನಾಳ, ಕಮಡೊಳ್ಳಿ ಮಾರ್ಗವಾಗಿ ಸಂಶಿ ಸೇರಿದಂತೆ ಇತರೆ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಕೆಂಪು ಮಣ್ಣು, ರಾಡಿ, ತಗ್ಗು, ಗುಂಡಿಗಳೇ ತುಂಬಿ ಹೋಗಿವೆ.

ಮಳೆಗಾಲ ಆರಂಭವಾದ್ರೇ, ಈ ರಸ್ತೆ ಅಕ್ಕಪಕ್ಕದ ಹೊಲಗಳಿಗೆ ಹೋಗುವುದು ಯಮಯಾತನೆ. ಹೀಗಾಗಿ ಕೆಲ ರೈತರ ಜಮೀನುಗಳು ಉಳುಮೆ ಇಲ್ಲದೆ ಖಾಲಿ ಉಳಿದಿವೆ. ಇದಲ್ಲದೇ ಬೆಣ್ಣೆ ಹಳ್ಳದ ಪ್ರವಾಹ ಈ ರಸ್ತೆಯನ್ನು ಪ್ರತಿ ವರ್ಷ ಅವ್ಯವಸ್ಥೆಗೆ ಈಡು ಮಾಡುತ್ತಿದೆ.

ಇಂತಹ ಅವ್ಯವಸ್ಥೆಗೆ ಸಿಲುಕಿ ಸಂಚಾರದ ತಾಪತ್ರಯ ಅನುಭವಿಸುತ್ತಿರುವ ಹಂಚಿನಾಳ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ, ಜನಪ್ರತಿನಿಧಿಗಳಿಗೆ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ರೂ ಅದರ ಪ್ರಯೋಜನ ಮಾತ್ರ ಶೂನ್ಯವಾಗಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By :
Kshetra Samachara

Kshetra Samachara

16/05/2022 02:38 pm

Cinque Terre

38.41 K

Cinque Terre

3

ಸಂಬಂಧಿತ ಸುದ್ದಿ