ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರ್ನಾಟಕ To ಗೋವಾ ಡಬಲ್ ಟ್ರ್ಯಾಕ್! ಹೊಸ ವರಸೆ ತೆಗೆದ ಗೋವಾ ಕಾಂಗ್ರೆಸ್ ಮುಖಂಡರು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ನಮ್ಮ ರಾಜ್ಯದ ಮೇಲೆ ಗೋವಾಗೆ ಅದೇನೊ ಮುನಿಸೋ‌ ಗೊತ್ತಿಲ್ಲ. ಪದೇ ಪದೇ ಕರ್ನಾಟಕದ ಜೊತೆ‌ ಗೋವಾ ಕ್ಯಾತೆ ತೆಗೆದು ಜಗಳ ಆಡುತ್ತಲೇ ಇರುತ್ತೆ. ಗೋವಾ ಕ್ಯಾತೆ ಎಂದ ಕೂಡಲೇ ನೀವು ಇದು ಮಹದಾಯಿ ವಿಷ್ಯI ಅಂದುಕೊಂಡ್ರಾ? ಅಲ್ಲಾ,,, ಇದು ಕರ್ನಾಟಕ ಸರ್ಕಾರದ ಜೊತೆಗೆ ಇದೀಗ ಗೋವಾ ಸರ್ಕಾರ ಹೊಸ ವರಸೆಯನ್ನ ಮುಂದುವರೆಸಿದೆ. ಅದೇನಂತೀರಾ? ಈ ಸ್ಟೋರಿ ನೋಡಿ

ಗೋವಾ ಮತ್ತು ಹುಬ್ಬಳ್ಳಿ-ಧಾರವಾಡದ ಸಂಪರ್ಕ ಕಲ್ಪಿಸುವ ವಾಸ್ಕೋ ಡಿ ಗಾಮಾ ಎಕ್ಸ್‌ಪ್ರೆಸ್‌ ರೈಲ್ವೆ ಸಂಚಾರ ಮಾಡುತ್ತಿವೆ. ಹುಬ್ಬಳ್ಳಿಯಿಂದ ಲೋಂಡಾದ ಮೂಲಕ ಗೋವಾಗೆ ತೆರಳುವ ರೈಲುಗಳ ಸಂಚಾರಕ್ಕಾಗಿ ಡಬಲ್ ಟ್ರ್ಯಾಕ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇದಕ್ಕೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿ, ಮಾಜಿ ಸಿಎಂ ದಿಗಂಬರ ಕಾಮತ್ ಅವರ ನೇತೃತ್ವದಲ್ಲಿ ಯೋಜನೆ ಕೈಬಿಡಲು ಹೋರಾಟ ನಡೆಸಿದ್ದು ಟ್ರ್ಯಾಕ್ ಮಾಡುವುದು ‌ನಿಲ್ಲಿಸಿ ಎಂದು ಪ್ರತಿಭಟನೆ ಹಾದಿ ತುಳಿದಿದೆ...

ಹುಬ್ಬಳ್ಳಿಯಿಂದ ಹೊರಡುವ ವಾಸ್ಕೋ ಡಿ‌ ಗಾಮಾ ರೈಲು ಸಂಚಾರಕ್ಕೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ, ಡಬಲ್ ಟ್ರಾಕ್ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಹೊಸಪೇಟೆಯಿಂದ ಗೋವಾದವರೆಗೆ ಡಬಲ್ ಟ್ರ್ಯಾಕ್ ಮಾಡಿದ್ರೆ, ಗೋವಾದ ಪ್ರಮುಖ ಸ್ಥಳಗಳು, ರೈತರ ಜಮೀನುಗಳು ಹಾಗೂ ಪಶ್ಚಿಮ ಘಟ್ಟದ ಪ್ರದೇಶದಕ್ಕೂ ಹಾನಿಯಾಗುತ್ತದೆ ಎಂದು ಆರೋಪಿಸಿ ಗೋವಾ ಪ್ರದೇಶ ಕಾಂಗ್ರೆಸ್, ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಿಭಾಗದ ಜೆನರಲ್ ಮ್ಯಾನೇಜರ್ ಪಿ.ಕೆ ಮಿಶ್ರಾ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ಗೋವಾದ ಮನವಿ ಸ್ವೀಕರಿಸಿದ ಪಿ.ಕೆ ಮಿಶ್ರಾ, ಇದರ ಬಗ್ಗೆ ಚರ್ಚಿಸೋದಾಗಿ ಹೇಳಿದ್ದಾರೆ..

ಒಟ್ಟಿನಲ್ಲಿ ಗೋವಾದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮಹದಾಯಿ ವಿಚಾರದಲ್ಲಿ ಮೂಗು ತುರಿಸುತ್ತಿದ್ದರೆ, ಇತ್ತ ಅಲ್ಲಿನ ವಿರೋಧ ಪಕ್ಷ ಕಾಂಗ್ರೆಸ್ ಇದೀಗ ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯ ವಿರುದ್ಧ ಹೋರಾಟ ನಡೆಸಿದೆ. ಇದರ ಬಗ್ಗೆ ರಾಜ್ಯ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಒದಗಿಸಬೇಕು......!

Edited By : Manjunath H D
Kshetra Samachara

Kshetra Samachara

13/11/2020 11:46 am

Cinque Terre

39.78 K

Cinque Terre

9

ಸಂಬಂಧಿತ ಸುದ್ದಿ