ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಬ್ಬಕ್ಕೆ ಬಟ್ಟೆ ಖರೀದಿ ಜೋರು.. ಪಾರ್ಕಿಂಗ್ ಗೆ ಇಲ್ಲ ಸೂರು

ಧಾರವಾಡ: ಕೊರೊನಾ ಮಧ್ಯೆಯೂ ಪ್ರಸಕ್ತ ವರ್ಷ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಎಲ್ಲ ಬಟ್ಟೆ ಅಂಗಡಿಗಳು ಜನಜಂಗುಳಿಯಿಂದ ತುಂಬಿವೆ. ದೀಪಾವಳಿ ಹಬ್ಬಕ್ಕೆ ಸಾರ್ವಜನಿಕರು ಬಟ್ಟೆ ಖರೀದಿ ಮಾಡಲು ಬರುತ್ತಿದ್ದು, ವಾಹನಗಳ ಪಾರ್ಕಿಂಗ್ ಜಾಗವೇ ಇಲ್ಲದಂತಾಗಿದೆ.

ನಗರದ ಅನೇಕ ಕಡೆ ಇರುವ ದೊಡ್ಡ ದೊಡ್ಡ ಕಮರ್ಷಿಯಲ್ ಕಟ್ಟಡಗಳಲ್ಲಿ ಬಟ್ಟೆ ಅಂಗಡಿಗಳಿದ್ದು, ಆ ಕಟ್ಟಡಗಳ ಮಾಲೀಕರು ಸುಪ್ರೀಂಕೋರ್ಟ ಹಾಗೂ ಮಹಾನಗರ ಪಾಲಿಕೆ ಆದೇಶವನ್ನೂ ಮೀರಿ ಕಟ್ಟಡಗಳನ್ನು ಕಟ್ಟಿದ್ದಾರೆ. ಕಟ್ಟಡದ ತಳಭಾಗದಲ್ಲಿ ಪಾರ್ಕಿಂಗ್ ಗೆ ಜಾಗ ಬಿಡಬೇಕು ಎಂಬ ಆದೇಶವಿದ್ದರೂ ಆ ಆದೇಶವನ್ನು ಮೀರಿ ತಳಭಾಗದಲ್ಲೂ ಕಾಂಪ್ಲೆಕ್ಸ್ ಗಳನ್ನು ಮಾಡಿ ಬಾಡಿಗೆಗೆ ನೀಡುತ್ತಿದ್ದಾರೆ. ಇದರಿಂದಾಗಿ ಪಾರ್ಕಿಂಗ್ ಗೆ ಜಾಗವಿಲ್ಲದೇ ರಸ್ತೆಯ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡುವ ಅನಿವಾರ್ಯತೆ ಎದುರಾಗಿದೆ.

ಬಟ್ಟೆ ಅಂಗಡಿಗಳಿಗೆ ಜನ ಬರುತ್ತಿದ್ದು, ಅವರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್ ಮಾಡಬೇಕಾಗಿದೆ. ಧಾರವಾಡದ ಸುಭಾಷ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪಾರ್ಕಿಂಗ್ ಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಆದರೆ, ನಿಯಮಾವಳಿ ಪ್ರಕಾರ ಕಮರ್ಷಿಯಲ್ ಕಟ್ಟಡಗಳ ಮಾಲೀಕರು ಮೀಸಲಿಡಬೇಕಾಗಿದ್ದ ಪಾರ್ಕಿಂಗ್ ಜಾಗ ಎಲ್ಲಿ ಹೋಯ್ತು ಎಂಬುದೇ ಪ್ರಶ್ನೆಯಾಗಿದೆ.

ದೊಡ್ಡ ದೊಡ್ಡ ಕಮರ್ಷಿಯಲ್ ಕಟ್ಟಡಗಳಲ್ಲಿರುವ ಬಟ್ಟೆ ಅಂಗಡಿಗಳು ಇದೀಗ ಹಬ್ಬದ ಅಂಗವಾಗಿ ಜನರಿಂದ ತುಂಬಿ ತುಳುಕುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಿಸಲಾದ ಕಟ್ಟಡಗಳಿಂದಾಗಿ ಪಾರ್ಕಿಂಗ್ ಜಾಗವೇ ಮಾಯವಾಗಿದ್ದು, ಮಹಾನಗರ ಪಾಲಿಕೆ ಇದರತ್ತ ಗಮನಹರಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

Edited By : Manjunath H D
Kshetra Samachara

Kshetra Samachara

12/11/2020 11:32 am

Cinque Terre

28.52 K

Cinque Terre

9

ಸಂಬಂಧಿತ ಸುದ್ದಿ