ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಒಂದೊಂದು ಕಡೆ ಇಷ್ಟೊಂದು ಸಿಗ್ನಲ್! ನಾವು ಯಾವುದನ್ನು ನೋಡಬೇಕು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಒಂದು ಕಡೆ ಸಿಗ್ನಲ್ ಇಲ್ಲದೆ, ಸವಾರರು ನುಗ್ಗುತ್ತಿದ್ದರೆ. ಇನ್ನೊಂದು ಕಡೆ ಯಾವ ಸಿಗ್ನಲ್ ದೀಪ ನೋಡಿ ಚಾಲನೆ ಮಾಡಬೇಕು ಎಂಬ ಗೊಂದಲದಲ್ಲಿ ವಾಹನ ಸವಾರರು ಇದ್ದಾರೆ. ಅಷ್ಟಕ್ಕೂ ಅದು ಯಾವ ರೀತಿ ಗೊಂದಲ ಅಂತೀರಾ ಹಾಗಿದ್ದರೆ ಈ ವಿಡಿಯೋ ನೋಡಿ......

ಹೀಗೆ ನಗರದ ಬಹುತೇಕ ವೃತ್ತಗಳಲ್ಲಿ ಸಿಗ್ನಲ್ ಕಂಬಗಳೇ ತುಂಬಿದ್ದು, ಯಾವ ದೀಪ ಉರಿಯುತ್ತಿದೆ ಎಂದು ಊಹಿಸುವುದೇ ವಾಹನ ಸವಾರರಿಗೆ ಸವಾಲಿನ ಕಾರ್ಯವಾಗಿದೆ. ಎತ್ತ ನೋಡಿದರೆ ಟ್ರಾಫಿಕ್ ಸಿಗ್ನಲ್ ಗೋಚರಿಸುತ್ತವೆ. ಕೆಲವು ಕಂಬಗಳಲ್ಲಿ ದೀಪಗಳಿವೆ. ಕೆಲವು ಕಂಬಗಳಲ್ಲಿ ನಿಂತಿವೆ. ಒಂದೇ ಕಂಬಗಳಿದ್ದು , ಮೂರು ಯಾವುದು ಕಾರ್ಯ ನಿರ್ವಹಿಸುತ್ತದೆ ಎಂಬುದೇ ಅರ್ಥವಾಗುವುದಿಲ್ಲ. ಹೀಗಾಗಿ ವಾಹನ ಸವಾರರು ಎಲ್ಲಾ ಕಂಬಗಳನ್ನೊಮ್ಮೆ ಕಣ್ಣಾಡಿಸಿಯೇ ಮುಂದೆ ಹೋಗುವಂತಾಗಿದೆ...

ಇನ್ನು ಸಂಚಾರ ದಟ್ಟಣೆ ಇಲ್ಲದ, ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಸುಮಾರು 16 ಸಿಗ್ನಲ್ ಕಂಬಗಳಿದ್ದು, ಅವುಗಳಲ್ಲಿ ಆರು ಮಾತ್ರ ಕಾರ್ಯ ನಿರ್ವಹಿಸುತ್ತವೆ. ಬಸವ ವನದ ಬಳಿ 8, ಇಂದಿರಾ ಗಾಜಿನ ಮನೆ ಬಳಿ 16, ಹೊಸುರ ಸರ್ಕಲ್ ಬಳಿ 7, ಅಂಬೇಡ್ಕರ್ ಸರ್ಕಲ್ ಬಳಿ 7, ಹೀಗೆ ಒಂದೊಂದು ಟ್ರಾಫಿಕ್ ಸಿಗ್ನಲ್ ಬಳಿ ಬಂದ ಬಿದ್ದಂತಹ ಕಂಬಗಳನ್ನು ತೆರವುಗೋಳಿಸಿದೆ ಹಾಗೆಯೇ ಬಿಟ್ಟಿದ್ದಾರೆ. ಹೀಗೆ ಕೋಟ್ಯಾಂತರ ರೂ. ಖರ್ಚು ಮಾಡಿ ಹೊಸ ಕಂಬಗಳನ್ನು ಹಾಕುತ್ತಾರೆ. ಆದರೆ ಹಳೆ ಕಂಬಗಳನ್ನು ತೆರವುಗೋಳಿಸದೆ ವಾಹನ ಸವಾರರಿಗೆ ಗೊಂದಲವನ್ನುಂಟು ಮಾಡುತ್ತಿದ್ದಾರೆ.....

ಹಳೆ ಕಂಬಗಳು ಸುಸ್ಥಿತಿಯಲ್ಲಿದ್ದರೂ ನಿರ್ವಹಣೆ ಕೊರತೆಯಿಂದ ಧೂಳು , ಮಳೆ, ಬಿಸಿಲಿನಲ್ಲಿ ಕೊಳೆಯುತ್ತಿವೆ. ನಿರುಪಯುಕ್ತ ಕಂಬಗಳನ್ನು ತೆರವುಗೊಳಿಸುವುದರಿಂದ ವೃತ್ತದ ಸೌಂದರ್ಯ ಹೆಚ್ಚುತ್ತದೆ ಹಾಗೂ ಬಳಕೆಯಲ್ಲಿರುವ ವಸ್ತುಗಳನ್ನು ಬೇರೆಡೆಗೆ ಬಳಸಬಹುದಾಗಿದೆ . ಎನ್ನುವುದು ಸಾರ್ವಜನಿಕರ ಆಶಯವಾಗಿದೆ......!

ವರದಿ: ಈರಣ್ಣ ವಾಲಿಕಾರ

Edited By : Manjunath H D
Kshetra Samachara

Kshetra Samachara

08/11/2020 10:34 am

Cinque Terre

56.47 K

Cinque Terre

20

ಸಂಬಂಧಿತ ಸುದ್ದಿ