ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ್ ಪೂಜಾರ
ಕುಂದಗೋಳ : ಎಲ್ಲೆಡೆ ಲಸಿಕೆ ಕೊರತೆಯಿಂದ ಜಾನುವಾರುಗಳ ಜೀವ ಹಿಂಡುತ್ತಾ, ರೈತ ಕುಲಕ್ಕೆ ಕಂಟಕವಾಗಿ ಪರಿಣಮಿಸಿದ್ದ ಚರ್ಮ ಗಂಟು ರೋಗಕ್ಕೆ ಕೊನೆಗೂ ಸಮರ್ಪಕ ಲಸಿಕೆ ಲಭ್ಯವಾಗಿದೆ.
ಹೌದು ! ಕುಂದಗೋಳ ತಾಲೂಕಿನಲ್ಲಿ ಕಳೆದ ಎರಡು ಮೂರು ತಿಂಗಳಿಂದ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹೆಚ್ಚಾಗಿ ಲಸಿಕೆ ಅಭಾವದಿಂದ ರೈತರು ಭಯದಲ್ಲಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಹೆಚ್ಚುತ್ತಿರುವ ಚರ್ಮ ಗಂಟು ರೋಗದ ಪ್ರಕರಣ ಹಾಗೂ ಲಸಿಕೆ ಅಭಾವ ಕಂಡು ಭಯದಲ್ಲಿದ್ದ ರೈತರ ಅಭಿಪ್ರಾಯ ಪಡೆದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಶೀಘ್ರ ಲಸಿಕೆ ಪೂರೈಸುವಂತೆ ವರದಿ ಬಿತ್ತರಿಸಿತ್ತು.
ಸದ್ಯ ಕುಂದಗೋಳ ತಾಲೂಕಿನಲ್ಲಿರುವ 27 ಸಾವಿರ ಜಾನುವಾರು ಪೈಕಿ 19,522 ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ಒಟ್ಟು 25 ಸಾವಿರ ಡೋಸ್ ಲಸಿಕೆ ಕುಂದಗೋಳ ಪಶು ಆಸ್ಪತ್ರೆಗೆ ಬಂದಿವೆ.
ಒಟ್ಟಾರೆ ಲಸಿಕೆ ಇಲ್ಲ ಇಲ್ಲ ಎಂದು ಅನ್ನದಾತ ಭಯ ಪಡುವ ದಿನ ದೂರವಾಗಿದ್ದು, ಪಬ್ಲಿಕ್ ನೆಕ್ಸ್ಟ್ ವರದಿ ಫಲವಾಗಿ ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಲಸಿಕೆ ಸರಬರಾಜು ಆಗಲಿದೆ. ಸದ್ಯ ಕುಂದಗೋಳ ತಾಲೂಕಿನಲ್ಲಿ 761 ಚರ್ಮ ಗಂಟು ರೋಗ ಪ್ರಕರಣ ಇದ್ದು ಅವುಗಳಲ್ಲಿ 661 ಜಾನುವಾರು ಚೇತರಿಕೆ ಕಂಡ್ರೆ 11 ಜಾನುವಾರು ಸಾವನ್ನಪ್ಪಿವೆ. ಆ ರೈತರಿಗೆ ಶೀಘ್ರವೇ ಪರಿಹಾರವೂ ಸಿಗಲಿದೆ.
ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 07:19 pm